ಉಡುಪಿ:(ಫೆ.22) ದುಷ್ಕರ್ಮಿಗಳು ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಮೂಡುಬೆಳ್ಳೆ ಗ್ರಾಮದ ಕಟ್ಟಿಂಗೇರಿ ಸಮೀಪದ ಕುದ್ರಮಲೆ ಎಂಬಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕೋಲಾರ: ವೈದ್ಯನ ಎಡವಟ್ಟಿನಿಂದ ಯುವಕ ಸಾವು
ಖಾಸಗಿ ಜಾಗದಲ್ಲಿರುವ ಈ ಶಿಲುಬೆಯನ್ನು ಸುತ್ತಮುತ್ತಲಿನ ಕ್ರೈಸ್ತ ಕುಟುಂಬದವರು ಕಳೆದ 30 ವರ್ಷಗಳಿಂದ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಗುಡ್ಡದ ಮೇಲಿರುವ ಈ ಶಿಲುಬೆಯನ್ನು ಧ್ವಂಸಗೊಳಿಸಿರುವುದು ಫೆ.19ರಂದು ಬೆಳಕಿಗೆ ಬಂದಿದೆ.
ಇದಕ್ಕಿಂತ 15 ದಿನಗಳ ಹಿಂದೆ ಇಲ್ಲಿ ಪೂಜೆ ಸಲ್ಲಿಸಲಾಗಿತ್ತು. ಆ ಬಳಿಕ ಇತ್ತ ಯಾರೂ ಕೂಡ ಹೋಗಿರಲಿಲ್ಲ.




ಫೆ.19 ರಂದು ಸ್ಥಳೀಯರು ಅಲ್ಲಿಗೆ ತೆರಳಿದಾಗ ದುಷ್ಕರ್ಮಿಗಳು ಶಿಲುಬೆಯನ್ನು ಮುರಿದು ಹಾನಿಗೊಳಿಸಿರುವುದು ಕಂಡುಬಂದಿದೆ. ಈ ಬಗ್ಗೆ ಫೆ. 21ರಂದು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
