ಚಿಕ್ಕಬಳ್ಳಾಪುರ, (ಫೆ.25): ತನ್ನ ಲವರ್ ಬಾಯ್ ಬೇರೆ ಹುಡುಗಿ ಜೊತೆ ಮಾತನಾಡಿದ್ದಕ್ಕೆ ಮನನೊಂದು ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಿಯಕರ ಆದರ್ಶ ನ ಜೊತೆ ಫೆಬ್ರವರಿ 23 ರಂದು ಜಗಳವಾಡಿದ್ದ ಪ್ರೇಯಸಿ ಸುಚಿತ್ರಾ(17), ಫೆಬ್ರವರಿ 24 ರಂದು ಸಾದೇನಹಳ್ಳಿಯ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದನ್ನೂ ಓದಿ: ಬೆಂಗಳೂರು: ಮದುವೆಯಾಗಿದ್ದವಳ ಹಿಂದೆ ಬಿದ್ದ ವ್ಯಕ್ತಿ
ಪ್ರಿಯಕರ ಆದರ್ಶ ಬೇರೊಬ್ಬಳ ಜತೆ ಮಾತನಾಡಿದ್ದಕ್ಕೆ ಪ್ರಿಯತಮೆ ಸುಚಿತ್ರಾ ಕೋಪ ಮಾಡಿಕೊಂಡಿದ್ದಳು. ಇದೇ ವಿಚಾರವಾಗಿ ಫೆ.23 ರಂದು ಆದರ್ಶನ ಜೊತೆ ಪ್ರೇಯಸಿ ಸುಚಿತ್ರಾ ಜಗಳವಾಡಿದ್ದಳು. ಬಳಿಕ ಅದೇನಾಯ್ತೋ ಏನೋ ಪ್ರಿಯಕರನ ನಡೆಯಿಂದ ಬೇಸರಗೊಂಡು ಸುಚಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 ವರ್ಷದ ಸುಚಿತ್ರಾ ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲೂಕಿನ ಸಾದೇನಹಳ್ಳಿ ಗ್ರಾಮದ ವಾಸಿ. ಗೌರಿಬಿದನೂರು ನಗರದ ನ್ಯಾಷನಲ್ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವಿದ್ಯಾಭ್ಯಾಸ ಮಾಡ್ತಿದ್ದಳು, ಆದ್ರೆ ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಪ್ರಣಯ ಅಂತ ಮಂಚೇನಹಳ್ಳಿ ನಿವಾಸಿ ಫೋಟೊಗ್ರಾಫರ್ ನೊಂದಿಗೆ ಪ್ರೇಮಾಂಕುರವಾಗಿದೆ. ಇಬ್ಬರು ಒಂದೇ ಮನೆಯಲ್ಲಿ ಕೆಲಕಾಲ ಸಹ ಜೀವನ ನಡೆಸಿದ್ದಾರೆ. ಆದ್ರೆ ಇತ್ತೀಚಿಗೆ ಫೋಟೊಗ್ರಾಫರ್ ಈಕೆಯ ಬದಲು ಬೇರೊಬ್ಬ ಯುವತಿಯ ಜೊತೆ ಸಲುಗೆಯಿಂದ ಇದ್ದು ಆಕೆಯ ಜೊತೆ ಮಾತನಾಡುತ್ತಿದ್ದಂತೆ, ಇದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸುಚಿತ್ರಾ ಸಾವಿಗೆ ಆಕೆಯ ಪ್ರಿಯಕರನೇ ಕಾರಣ ಅಂತ ಮೃತಳ ಅಕ್ಕಂದಿರು ಆರೋಪ ಮಾಡಿದ್ದಾರೆ.

ಮಂಚೇನಹಳ್ಳಿ ಮೂಲದ ಫೋಟೊಗ್ರಾಫರ್ ಸುಚಿತ್ರಾಳನ್ನು ಮದುವೆ ಮಾಡಿಕೊಳ್ಳೊದಾಗಿ ನಂಬಿಸಿ ಪ್ರೀತಿ ಪ್ರೇಮ ಪ್ರಣಯ ಅಂತ ಹನಿಮೂನ್ ಗೂ ಕರೆದುಕೊಂಡು ಹೋಗಿದ್ದನಂತೆ. ಇನ್ನೂ ಸುಚಿತ್ರಾ ಮನೆಯಲ್ಲಿ ತಾಯಿ ಒಬ್ಬರೇ ಇದ್ದ ಕಾರಣ, ತಾಯಿ, ಮಗಳಿಗೂ ಹಾಗೂ ಮನೆಯ ಸಮಸ್ಯೆಗಳಿಗೂ ಆಶ್ರಯವಾಗಿದ್ದನಂತೆ. ಸುಚಿತ್ರಾಳಿಗೆ 18 ವರ್ಷ ತುಂಬಿದ ತಕ್ಷಣ ಮದುವೆ ಮಾಡಿಕೊಳ್ಳೋದಾಗಿ ನಂಬಿಸಿದ್ದನಂತೆ. ಆರೋಪಿ ಫೋಟೋಗ್ರಾಫರ್ನದ್ದು ಏನು ತಪ್ಪಿಲ್ಲ. ಮಗಳ ಪ್ರಿಯಕರ ಬೇರೆ ಹುಡುಗಿಯ ಜೊತೆ ಮಾತನಾಡಿದ್ದಕ್ಕೆ ಜಗಳ ಮಾಡಿದ್ದಾಳೆ. ತಮ್ಮ ಮಗಳೇ ಹುಡುಗನಿಗೆ ಹೊಡೆದಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಲ್ಲಿ ಹುಡುಗನ ತಪ್ಪು ಇಲ್ಲವೆಂದಿದ್ದಾಳೆ ಮೃತಳ ತಾಯಿ.

ವಯಸ್ಸಲ್ಲದ ವಯಸ್ಸಿನಲ್ಲಿ ಹುಚ್ಚು ಕೋಡಿ ಮನಸ್ಸು ಅಂತ, ಪ್ರೀತಿ ಪ್ರೇಮ ಪ್ರಣಯ ಎಂದು ಸುತ್ತಾಡಲು ಹೋಗಿ ಏನೋ ಮಾಡಲು ಹೋಗಿ ಇನ್ನೇನು ಮಾಡಿಕೊಂಡರು ಅನ್ನುವ ಹಾಗೆ ಪ್ರೀತಿಸಿದ ಹುಡುಗ ಬೇರೆ ಹುಡುಗಿಯ ಜೊತೆ ಮಾತನಾಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದು ಮಾತ್ರ ವಿಪರ್ಯಾಸದ ಸಂಗತಿ.

