ಧರ್ಮಸ್ಥಳ:(ಫೆ.26) ಹಲವರ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಧರ್ಮಸ್ಥಳ ಗ್ರಾಮದ ಅಜಿಕುರಿಯಲ್ಲಿ ನಡೆದಿದೆ. ದಾಳಿಯಿಂದಾಗಿ ಹಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಇದನ್ನೂ ಓದಿ: Pune: ಮಹಿಳೆಯ ಮುಂದೆ ಹಸ್ತಮೈಥುನ ಮಾಡಿಕೊಂಡ 20 ವರ್ಷದ ಕ್ಯಾಬ್ ಚಾಲಕ
ಫೆ.26 ರಂದು ಬೆಳಗ್ಗೆ ಎಂಟು ಗಂಟೆಯ ವೇಳೆ ಹೆಜ್ಜೇನು ದಾಳಿ ಆರಂಭವಾಗಿದ್ದು, ಅಜಿಕುರಿಯಲ್ಲಿ ಹಲವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಮನೆಗಳಲ್ಲಿ ಇದ್ದವರ ಮೇಲೂ ಹೆಜ್ಜೇನು ದಾಳಿ ನಡೆಸಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಈ ಪರಿಸರದಲ್ಲಿ ಹತ್ತಾರು ಮಂದಿಗೆ ಹೆಜ್ಜೇನು ಕಚ್ಚಿದ್ದು ಆರು ಮಂದಿಯ ಮೇಲೆ ಗಂಭೀರ ದಾಳಿ ನಡೆಸಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗ್ಗೆ ಒಂದು ಸುತ್ತು ದಾಳಿ ನಡೆಸಿದ ಹೆಜ್ಜೇನು ಬಳಿಕ ಹತ್ತು ಗಂಟೆಯ ಸುಮಾರಿಗೆ ಮತ್ತೊಮ್ಮೆ ಗುಂಪಾಗಿ ಬಂದು ಸ್ಥಳೀಯರ ಮೇಲೆ ದಾಳಿ ನಡೆಸಿದೆ. ಹೆಜ್ಜೇನುಗಳು ಈಗಲೂ ಆ ಪರಿಸರದಲ್ಲಿ ಹಾರಾಡುತ್ತಿದ್ದು, ಅಜಿಕುರಿ ಪರಿಸರದಲ್ಲಿ ಜನರು ಮನೆಯಿಂದ ಹೊರಗೆ ಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
