ಪುಣೆ:(ಫೆ.26) ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ಮುಂದೆ ಕ್ಯಾಬ್ ಚಾಲಕ ಹಸ್ತಮೈಥುನ ಮಾಡಿ, ಅಸಭ್ಯವಾಗಿ ವರ್ತಿಸಿದ ಘಟನೆ ಪುಣೆಯ ಕಲ್ಯಾಣಿ ನಗರ ಪ್ರದೇಶದಲ್ಲಿ ನಡೆದಿದೆ.

ಇದನ್ನೂ ಓದಿ : ಮಂಗಳೂರು: ಮಂಗಳೂರಿನಲ್ಲಿ ಹೆಚ್ಚಾದ ನಕಲಿ ತೃತೀಯ ಲಿಂಗಿಗಳ ಹಾವಳಿ
ಕಲ್ಯಾಣಿ ನಗರದ ಕಂಪನಿಯ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ರೊಬ್ಬರು ಫೆ.21 ರಂದು ಸಂಜೆ 7.30 ಕ್ಕೆ ಪ್ರಯಾಣ ಮಾಡಲು ಕ್ಯಾಬ್ ಬುಕ್ ಮಾಡಿದ್ದು, ಸಂಗಮವಡಿ ರಸ್ತೆಯಲ್ಲಿ ಆಕೆಯನ್ನು ಕರೆದೊಯ್ಯಲು ಕ್ಯಾಬ್ ಬಂದಿತ್ತು.


ಆರೋಪಿ ಚಾಲಕ ಹಿಂಬದಿಯ ಕನ್ನಡಿಯ ಮೂಲಕ ಸಂತ್ರಸ್ತೆಯನ್ನು ನೋಡುತ್ತಾ ಹಸ್ತಮೈಥುನ ಮಾಡಿಕೊಳ್ಳಲು ಆರಂಭ ಮಾಡಿದ್ದಾನೆ. ಯುವತಿ ಇದನ್ನು ಕಂಡು ಭಯಭೀತಳಾಗಿ ಹೆದ್ದಾರಿಯಲ್ಲಿ ಕಾರನ್ನು ನಿಲ್ಲಿಸಿ ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾಳೆ.


ಖಡ್ಕಿ ಪೊಲೀಸರು 20 ವರ್ಷದ ಕ್ಯಾಬ್ ಚಾಲಕ ಆರೋಪಿ ಸುಮಿತ್ ಕುಮಾರ್ ಉತ್ತರ ಪ್ರದೇಶದವನವಾಗಿದ್ದು ಬಂಧನ ಮಾಡಿದ್ದಾರೆ. ಕೆಲಸಕ್ಕೆಂದು ಮುಂಬೈನಿಂದ ಪಿಂಪ್ರಿ-ಚಿಂಚ್‌ವಾಡಕ್ಕೆ ಬಂದಿದ್ದ.
