ಬಂಟ್ವಾಳ:(ಫೆ.27) ಚಲಿಸುತ್ತಿದ್ದ ಬಸ್ಸಿನೊಳಗಿದ್ದ ಪ್ರಯಾಣಿಕರೊಬ್ಬರ ಮೊಬೈಲ್ ಕಾರಿನ ಗಾಜಿನ ಮೇಲೆ ಬಿದ್ದಿದೆ. ಮೊಬೈಲ್ ಬಿದ್ದ ಪರಿಣಾಮ ಐದು ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ ಘಟನೆ ಬಿ.ಸಿ.ರೋಡಿನ ತಲಪಾಡಿಯಲ್ಲಿ ನಡೆದಿದೆ.

ಇದನ್ನೂ ಓದಿ: ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಿರಿಯ ನಟಿ ಶೃತಿ, ನಿರ್ದೇಶಕ ತರುಣ್ ಸುಧೀರ್ ದಂಪತಿ ಭೇಟಿ
ಬಿ.ಸಿ.ರೋಡ್ ಕೈಕಂಬ ಚಾವಡಿಗುತ್ತು ಮನೆ ನಿವಾಸಿ ಅನಿತಾ ಮರಿಯ ಲೋಬೊ ಅವರು ಫೆ.25ರಂದು ಕಾರಿನಲ್ಲಿ ಫರಂಗಿಪೇಟೆ ಕಡೆಯಿಂದ ಕೈಕಂಬಕ್ಕೆ ಆಗಮಿಸುತ್ತಿದ್ದಾಗ

ತಲಪಾಡಿಯಲ್ಲಿ ಮುಂದೆ ಸಾಗುತ್ತಿದ್ದ ಬಸ್ಸಿನಿಂದ ಪ್ರಯಾಣಿಕರೊಬ್ಬರ ಮೊಬೈಲ್ ಅವರ ಕಾರಿನ ಬೋನೆಟ್ ಮೇಲೆ ಬಿದ್ದಿದೆ.

ಈ ವೇಳೆ ಅವರು ದಿಢೀರ್ ಬ್ರೇಕ್ ಹಾಕಿದ್ದು, ಆ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ನಾಲ್ಕು ಕಾರುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಘಟನೆಯಲ್ಲಿ ಕಾರುಗಳಿಗೆ ಹಾನಿಯಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


