Mon. Mar 10th, 2025

Bantwal: ದಿಗಂತ್‌ನನ್ನು ಮಂಗಳಮುಖಿಯರು ಅಪಹರಿಸಿರುವುದು ಸುಳ್ಳು – ಇದು ಫೇಕ್, ಯಾರೂ ಕೂಡ ಸುಳ್ಳು ಸುದ್ದಿ ಹರಡಬಾರದು – ಸಂಬಂಧಿ ಪ್ರಣಮ್

ಬಂಟ್ವಾಳ (ಮಾ.06): ಕಳೆದ 10 ದಿನಗಳಿಂದ ನಾಪತ್ತೆಯಾಗಿರುವ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಕಿದೆಬೆಟ್ಟು ನಿವಾಸಿ, ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: ಧರ್ಮಸ್ಥಳ : ಕನ್ಯಾಡಿ ಸ.ಉ.ಹಿ.ಪ್ರಾ. ಶಾಲೆಯಲ್ಲಿ “ಸ್ಪರ್ಶ ” ಹೆಣ್ಣು ಮಕ್ಕಳ ಜಾಗೃತಿ ಕಾರ್ಯಕ್ರಮ

ಇದೀಗ ಈತನನ್ನು ಮಂಗಳಮುಖಿಯರು ಅಪಹರಿಸಿರುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ದಿಗಂತ್‌ನ ಕುಟುಂಬದವರನ್ನು ಈ ಯುಪ್ಲಸ್ ವಾಹಿನಿ ಸಂಪರ್ಕ ಮಾಡಿದೆ.

ಆಗ ದಿಗಂತ್‌ನ ಸಂಬಂಧಿಕ ಪ್ರಣಮ್ ಅವರು ಯು ಪ್ಲಸ್ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದು ಇದು ಫೇಕ್,ಯಾರು ಕೂಡ ಸುಳ್ಳು ಸುದ್ದಿ ಹರಡಬಾರದು. ಸುಮ್ಮ ಸುಮ್ಮನೆ ಸುಳ್ಳು ನ್ಯೂಸ್‌ಗಳನ್ನು ಪೋಸ್ಟ್ ಮಾಡಬೇಡಿ.

UBAR UTSAVA: ಟೀಮ್ ದಕ್ಷಿಣ ಕಾಶಿ(ರಿ.) ಉಪ್ಪಿನಂಗಡಿ ಇದರ ವತಿಯಿಂದ “ಉಬಾರ್ ಉತ್ಸವ – 2025”

ಅದು ದಿಗಂತ್ ಕ್ಯಾರೆಕ್ಟರ್ ಮೇಲೆ ಪರಿಣಾಮವನ್ನು ಬೀರುತ್ತೆ. ಆತನ ತಂದೆ ತಾಯಿಯ ಬಗ್ಗೆಯೂ ಮಾನವೀಯ ದೃಷ್ಟಿಯಿಂದ ಯೋಚನೆ ಮಾಡಿ ಎಂದು ಮನವಿ ಮಾಡಿದ್ದಾರೆ. ಮಾತ್ರವಲ್ಲ ಸುಳ್ಳು ಸುದ್ದಿ ಹರಡುವ ಸಾಮಾಜಿಕ ಜಾಲತಾಣಗಳ ವಿರುದ್ಧವೂ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *