ಉಡುಪಿ:(ಮಾ.8) ಚಲಿಸುತ್ತಿದ್ದ ಖಾಸಗಿ ಬಸ್ಸಿನ ಸ್ಟೇರಿಂಗ್ ತುಂಡಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಉಡುಪಿ ಕರಾವಳಿ ಬೈಪಾಸ್‌ನಲ್ಲಿ ಸಂಭವಿಸಿದೆ.

ಇದನ್ನೂ ಓದಿ: ⭕ಧರ್ಮಸ್ಥಳ: ಆಸ್ತಿಯ ವಿಚಾರಕ್ಕಾಗಿ ಕತ್ತಿಯಿಂದ ಕಡಿದು ಕೊಲೆ
ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಉಡುಪಿಯಿಂದ ಬ್ರಹ್ಮಾವರದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ಸ್ಟೇರಿಂಗ್ ಇದ್ದಕ್ಕಿದ್ದಂತೆ ಕೈಕೊಟ್ಟಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಯ ಬದಿಯಲ್ಲಿ ಚಲಿಸಿ ನಿಂತಿದೆ.



ಕೂಡಲೇ ಎಚ್ಚೆತ್ತ ಚಾಲಕ ಹಾಗೂ ಸ್ಥಳೀಯರ ಸಹಕಾರದಿಂದ ಬಸ್ಸನ್ನು ರಸ್ತೆಯ ಬದಿಗೆ ಸರಿಸಲಾಯಿತು. ಸ್ಟೇರಿಂಗ್ ವೈಫಲ್ಯದಿಂದಾಗಿ ಬಸ್ಸು ಇದ್ದಕ್ಕಿದ್ದಂತೆ ನಿಂತಿದ್ದರಿಂದ ಕೆಲಕಾಲ ಕರಾವಳಿ ಬೈಪಾಸ್‌ನಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಉಡುಪಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸಂಚಾರವನ್ನು ಸುಗಮಗೊಳಿಸಿದರು. ಸ್ಟೇರಿಂಗ್ ವೈಫಲ್ಯದ ಕಾರಣ ಇನ್ನೂ ತಿಳಿದುಬಂದಿಲ್ಲ. ಬಸ್ಸನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.
