Mon. Mar 10th, 2025

Belthangady: ಗುರುವಾಯನಕೆರೆಯಲ್ಲಿ ರಂಝಾನ್ ಆಧ್ಯಾತ್ಮಿಕ ಕಾರ್ಯಕ್ರಮ – 95 ಕುಟುಂಬಗಳಿಗೆ ಕಿಟ್ ವಿತರಣೆ, ಸಾಮೂಹಿಕ ಇಫ್ತಾರ್

ಬೆಳ್ತಂಗಡಿ:(ಮಾ.10) ಎಸ್‌ವೈಎಸ್, ಎಸ್ಸೆಸ್ಸೆಫ್, ಕರ್ನಾಟಕ ಮುಸ್ಲಿಂ ಜಮಾಅತ್ ಗುರುವಾಯನಕೆರೆ -ಸುನ್ನತ್‌ಕೆರೆ ಯುನಿಟ್ ನೇತೃತ್ವದಲ್ಲಿ “ಮಹ್ಲರತುಲ್ ಬದ್ರಿಯ್ಯಾ ಆಧ್ಯಾತ್ಮಿಕ ಮಜ್ಲಿಸ್”, 95 ಅರ್ಹ ಕುಟುಂಗಳಿಗೆ ರಂಝಾನ್ ಆಹಾರ ಕಿಟ್ ವಿತರಣೆ, ಪ್ರಾರ್ಥನಾ ಸಂಗಮ, ಹಾಗೂ ಸಾಮೂಹಿಕ ಇಫ್ತಾರ್ ಕೂಟ ಮಾ. 9 ರಂದು ಗುರುವಾಯನಕೆರೆ ಶಾದಿ ಮಹಲ್ ಸಭಾಂಗಣದಲ್ಲಿ ಜರುಗಿತು.

ಇದನ್ನೂ ಓದಿ: 🔴ಬೆಳ್ತಂಗಡಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹಿರಿಯ ಮೇಲ್ವಿಚಾರಕಿಯಾಗಿದ್ದ ರತ್ನಾವತಿ.ಪಿ ಅವರಿಗೆ ವಯೋ ನಿವೃತ್ತಿ

ಅಧ್ಯಕ್ಷತೆಯನ್ನು ಎಸ್‌ವೈಎಸ್ ಯುನಿಟ್ ಅಧ್ಯಕ್ಷ ಅನ್ಸಾರ್ ವಹಿಸಿದ್ದರು. ಕುಪ್ಪೆಟ್ಟಿ ಮಸ್ಜಿದ್ ಧರ್ಮಗುರು ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ದುಆ ಪ್ರಾರ್ಥನೆಗೆ ನೇತೃತ್ವ ನೀಡಿದರು.


ಗುರುವಾಯನಕೆರೆ ಮುದರ್ರಿಸ್ ಜುನೈದ್ ಸಖಾಫಿ ಆಧ್ಯಾತ್ಮಿಕ ಮಜ್ಲಿಸ್ ಗೆ ನೇತೃತ್ವ ನೀಡಿದರು. ಖತೀಬ್ ಎ.ಕೆ ರಝಾ ಅಮ್ಜದಿ ಕುರ್‌ಆನ್ ತರಗತಿ ನಡೆಸಿಕೊಟ್ಟರು. ಹಂಝ ಮದನಿ ತೆಂಕಕಾರಂದೂರು ಶುಭಕೋರಿದರು.


ವೇದಿಕೆಯಲ್ಲಿ ಗುರುವಾಯನಕೆರೆ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಲೆತೀಫ್, ಮಾಜಿ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಸಂಘಟಕರಾದ ಹಸನ್ ಸಖಾಫಿ, ಅಬ್ಬೋನು ಮದ್ದಡ್ಕ, ಉಮರ್ ಮಾಸ್ಟರ್ ಮದ್ದಡ್ಕ, ಪಿ.ಕೆ ಅಬ್ದುಲ್ ರಹಿಮಾನ್ ಬೆಳ್ತಂಗಡಿ, ಕರ್ನಾಟಕ ಮುಸ್ಲಿಂ ಜಮಾಅತ್ ಯುನಿಟ್ ಅಧ್ಯಕ್ಷ ಮುತ್ತಲಿಬ್, ಆದಂ ಸಾಹೇಬ್ ಗುರುವಾಯನಕೆರೆ, ಎಸ್‌ಎಮ್‌ಎ ಝೋನ್ ಸಮಿತಿ ಅಧ್ಯಕ್ಷ ಉಮರ್ ಮಟನ್, ಶಂಶೀರ್ ಸಖಾಫಿ ಪರಪ್ಪು, ಮುಅಲ್ಲಿಮ್ ಮುಹಮ್ಮದ್ ಶರೀಫ್ ಝುಹುರಿ , ಸದರ್ ಆಸಿಫ್ ಮಿಸ್ಬಾಹಿ, ಎಸ್‌ವೈಎಸ್ ಮುಂಡಾಜೆ ಯುನಿಟ್ ಸದಸ್ಯ ಅಶ್ರಫ್ ಆಲಿಕುಂಞಿ ಮುಂಡಾಜೆ ಮೊದಲಾದವರು ಉಪಸ್ಥಿತರಿದ್ದರು.

ಮುಸ್ಲಿಂ ಜಮಾಅತ್ ಸರ್ಕಲ್ ಅಧ್ಯಕ್ಷ ಹಮೀದ್ ಮುಸ್ಲಿಯಾರ್ ಗುರುವಾಯನಕೆರೆ ಆರಂಭಿಕ‌ ದುಆ ನಡೆಸಿಕೊಟ್ಟರು. ಖ್ಯಾತ ವಾಗ್ಮಿ ಹಮೀದ್ ಫೈಝಿ ಉದ್ಘಾಟನೆ ನಡೆಸಿದರು. ಎಸ್‌ವೈಎಸ್ ಸರ್ಕಲ್ ಅಧ್ಯಕ್ಷ ಹಾಜಿ ಹಸೈನಾರ್ ಶಾಫಿ ಗುರುವಾಯನಕೆರೆ ಸ್ವಾಗತದೊಂದಿಗೆ ಪ್ರಸ್ತಾವನೆಗೈದು ಧನ್ಯವಾದವಿತ್ತರು. ಬಳಿಕ ಕಿಟ್ ವಿತರಣೆ ಹಾಗೂ ಸಾಮೂಹಿಕ ಇಫ್ತಾರ್ ನಡೆಯಿತು. ಜಂಟಿ ಸಮಿತಿಗಳ ಪದಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದರು.

Leave a Reply

Your email address will not be published. Required fields are marked *