Mon. Mar 10th, 2025

Kadaba: ಇಷ್ಟಾರ್ಥ ಸಿದ್ಧಿಗಾಗಿ ತಾಳಮದ್ದಳೆ ಸೇವೆಯ ಆರಂಭ

ಕಡಬ:(ಮಾ.10) ಅಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದುರ್ಗಾಂಬ ಕಲಾಸಂಗಮ ಶರವೂರು ಇದರ ವತಿಯಿಂದ ಇಷ್ಟಾರ್ಥ ಸಿದ್ಧಿಗಾಗಿ ಯಕ್ಷಗಾನ ತಾಳಮದ್ದಳೆ ಸೇವೆಯು ಶ್ರೀ ದೇವಿ ಸನ್ನಿದಿಯಲ್ಲಿ ಅರ್ಚಕರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶ್ರೀ ಕ್ಷೇತ್ರದ ಅರ್ಚಕರಾದ ಶ್ರೀ ಹರೀಶ ಉಪಾಧ್ಯಾಯ ಮತ್ತು ರಾಘವೇಂದ್ರ ಪ್ರಸಾದರು ದೀಪೋಜ್ವಲನ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಕ್ಷೇತ್ರದಲ್ಲಿ ದೇವಿಗೆ ಪ್ರಿಯವಾದ ಯಕ್ಷಗಾನ ಸೇವೆ ಹಿಂದಿನಿಂದಲೂ ನಡೆಯುತ್ತಿದ್ದು ಇಷ್ಟಾರ್ಥ ಸಿದ್ಧಿಗಾಗಿ ಈಗ ಆರಂಭಿಸಲ್ಪಡುತ್ತಿರುವ ತಾಳಮದ್ದಳೆಯು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಇದನ್ನೂ ಓದಿ: ⭕ವಿಟ್ಲ: ನೇಣುಬಿಗಿದುಕೊಂಡು 22 ವರ್ಷದ ಯುವಕ ಆತ್ಮಹತ್ಯೆ

ಮುಖ್ಯ ಅತಿಥಿಗಳಾಗಿ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಗಣರಾಜ ಕುಂಬಳೆ,ಉಪ್ಪಿನಂಗಡಿ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಗುಡ್ಡಪ್ಪಬಲ್ಯ ಶುಭ ಹಾರೈಸಿದರು.

ದೇವಳದ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೇಮಂತಕುಮಾರ ರೈ, ಕಲಾಸಂಗಮದ ಅಧ್ಯಕ್ಷ ಚಂದ್ರ ದೇವಾಡಿಗ ನಗ್ರಿ, ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: 🔴ಬೆಳ್ತಂಗಡಿ:‌ ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ

ಬಳಿಕ ಜರಗಿದ ಸೇವಾ ರೂಪದ ಶ್ರೀದೇವಿ ಕೌಶಿಕೆ ತಾಳಮದ್ದಳೆಯಲ್ಲಿ ಭಾಗವತರಾಗಿ ಶ್ರೀ ಗೋಪಾಲ ಭಟ್ ನೈಮಿಷ,
ಡಿ.ಕೆ. ಆಚಾರ್ಯ ಹಳೆನೇರೆಂಕಿ, ಹಿಮ್ಮೆಳದಲ್ಲಿ ಬಾಲಸುಬ್ರಹ್ಮಣ್ಯ ಭಟ್, ಚಂದ್ರ ದೇವಾಡಿಗ ನಗ್ರಿ, ಶ್ರೀಪತಿ ಭಟ್ ಉಪ್ಪಿನಂಗಡಿ , ಅರ್ಥದಾರಿಗಳಾಗಿ: (ಶ್ರೀದೇವಿ )ಗಣರಾಜ ಕುಂಬ್ಳೆ, (ದೇವೇಂದ್ರ)ದಿವಾಕರ ಆಚಾರ್ಯ ಗೇರುಕಟ್ಟೆ, (ಶುಂಭ 1)ದಿವಾಕರ ಆಚಾರ್ಯ ಹಳೆನೇರೆಂಕಿ


(ಚಂಡ 1) ಗುಡ್ಡಪ್ಪ ಬಲ್ಯ, (ಮುಂಡ 1)ಗುರುಪ್ರಸಾದ್ ಆಲಂಕಾರು, (ಚಂಡ 2)ರಾಮ್ ಪ್ರಸಾದ್ ಆಲಂಕಾರು, (ಮುಂಡ 2)ರಾಮ್ ಪ್ರಕಾಶ್ ಕೊಡಂಗೆ, (ಸುಗ್ರೀವ)ಜಯರಾಂ ಗೌಡ ಬಲ್ಯ , (ರಕ್ತಬೀಜ) ರಾಘವೇಂದ್ರ ಪ್ರಸಾದ್ ಭಟ್, (ಕೌಶಿಕೆ)ನಾರಾಯಣ ಭಟ್ ಆಲಂಕಾರು, (ಶುಂಭ 2) ಬಾಲಕೃಷ್ಣ ಕೇಪುಳು, (ಕೌಶಿಕೆ 2)ದಿವಾಕರ ಆಚಾರ್ಯ ಹಳೆನೇರೆಂಕಿ ಭಾಗವಹಿಸಿದ್ದರು.

ಕಾರ್ಯದರ್ಶಿಯಾದ ದಿವಾಕರ ಆಚಾರ್ಯ ಹಳೆ ನೇರೆಂಕಿ ಸ್ವಾಗತಿಸಿ ಪ್ರಸ್ತಾವನೆಗೈದರು. ಸಂಗಮದ ಕೋಶಾಧಿಕಾರಿ ಶ್ರೀ ಶ್ಯಾಮ್ ಪ್ರಸಾದ್ ವಂದಿಸಿದರು. ನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು.

ಇಷ್ಟಾರ್ಥ ಸಿದ್ಧಿಯ ಸೇವಾಕರ್ತರಾದ ಹರಿಪ್ರಸಾದ್ ಉಪಾಧ್ಯಾಯ, ರಾಘವೇಂದ್ರ ಪ್ರಸಾದ್ ಭಟ್, ಚಂದ್ರ ದೇವಾಡಿಗ ನಗ್ರಿ, ಸುಂದರ ಗೌಡ ನೆಕ್ಕಿಲಾಡಿ, ಡಿ.ಕೆ.ಆಚಾರ್ಯ ಹಳೆನೇರೆಂಕಿ,ಸೇಸಪ್ಪ ಪೂಜಾರಿ ಕೇಪುಳು ಇವರಿಗೆ ಸೇವಾ ರೂಪದ ಪ್ರಸಾದವನ್ನು ಶ್ರೀದೇವಿಯ ಸನ್ನಿಧಿಯಲ್ಲಿ ನೀಡಲಾಯಿತು.

Leave a Reply

Your email address will not be published. Required fields are marked *