ಕಾರ್ಕಳ:(ಮಾ.11) ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ಫೆಬ್ರವರಿ 26ರಂದು ಸಂಭವಿಸಿದ ಸ್ಕೂಟರ್ ಅಪಘಾತದಲ್ಲಿ ಪಲಾಯನ ಮಾಡಿದ ಕಾರಿನ ಚಾಲಕನನ್ನು ಪೊಲೀಸರು ಉಜಿರೆಯಲ್ಲಿ ಗುರುತಿಸಿ, ವಾಹನವನ್ನು ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: ⭕ಪಡುಬಿದ್ರಿ : ಇನ್ಸ್ಟಾಗ್ರಾಂ ನಲ್ಲಿ ಯುವತಿ ಅಶ್ಲೀಲ ಸಂದೇಶ ರವಾನೆ
ಈ ದುರ್ಘಟನೆಯಲ್ಲಿ ಸ್ಕೂಟರ್ ಸವಾರ ರಾಜೇಶ್ ಶೆಟ್ಟಿ (35) ಗಂಭೀರ ಗಾಯಗೊಂಡಿದ್ದರು. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದರು.


ಅಪಘಾತದ ಬಳಿಕ ಕಾರಿನ ಚಾಲಕ ಹಾಗೂ ಪ್ರಯಾಣಿಕರು ಸ್ಥಳದಿಂದ ಪರಾರಿಯಾಗಿದ್ದರು. ಪೊಲೀಸರು ಸಿ.ಸಿ.ಟಿವಿ ದೃಶ್ಯ ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಅನ್ವೇಷಿಸಿ, ಕಾರಿನ ಪತ್ತೆ ಹಚ್ಚಿದ್ದಾರೆ. ತನಿಖೆಯ ಪ್ರಕಾರ, ಈ ಕಾರು ವಿವಾಹ ಸಮಾರಂಭಕ್ಕೆ ತೆರಳುತ್ತಿತ್ತು.


ಈಗ ಪೊಲೀಸರು ಅಪಘಾತಕ್ಕೆ ಕಾರಣವಾದ ಚಾಲಕನ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
