ಬಿ.ಸಿ.ರೋಡ್ :(ಮಾ.17) ಕಳೆದ ವಾರ ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಅಪಘಾತಕ್ಕೀಡಾಗಿದ್ದ ಬಿ.ಸಿ.ರೋಡು ಕೈಕುಂಜೆ ಬಳೀಯ ಯುವ ವಕೀಲ ಪ್ರಥಮ್ ಬಂಗೇರ (27) ಸೋಮವಾರ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.

ಇದನ್ನೂ ಓದಿ: 🔴ಬೆಳ್ತಂಗಡಿ: ದೀಪದ ಬತ್ತಿ ತಯಾರಿ ತರಬೇತಿಯ ಸಮಾರೋಪ ಕಾರ್ಯಕ್ರಮ
ಮೃತರ ಎರಡು ಕಣ್ಣು, ಎರಡು ಕಿಡ್ನಿ, ಲಿವರ್ ಮತ್ತು ಕರುಳಿನ ಭಾಗವನ್ನು ದಾನವಾಗಿ ನೀಡಿ ಮೃತರ ತಂದೆ ಮತ್ತು ಸಹೋದರ ಮಾನವೀಯತೆಯನ್ನು ತೋರಿದ್ದಾರೆ.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಎಲ್‌ಎಲ್‌ಬಿ ಶಿಕ್ಷಣ ಪಡೆದು ಬಿ.ಸಿ.ರೋಡಿನ ಕೆ.ವೆಂಕಟ್ರಮಣ ಶೆಣೈಯವರ ಬಳಿ ವಕೀಲ ವೃತ್ತಿಯನ್ನು ಅಭ್ಯಾಸ ಮಾಡುತ್ತಿದ್ದರು.




ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚುರುಕಾಗಿದ್ದು, ಒಳ್ಳೆಯ ನೃತ್ಯಪಟುವೂ ಆಗಿದ್ದರು. ಕಳೆದ ನವೆಂಬರ್ ತಿಂಗಳಿನಲ್ಲಿ ಇವರ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮೃತರಿಗೆ ತಂದೆ ಮತ್ತು ಸಹೋದರ ಇದ್ದರು.
