Mon. Mar 17th, 2025

Mulki: ಓವ‌ರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದ ಬೈಕ್‌ – ಬೈಕ್‌ ಸವಾರ ಸ್ಪಾಟ್‌ ಡೆತ್!!

ಮುಲ್ಕಿ:(ಮಾ.17) ಸ್ಕೂಟರ್ ಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಬಟ್ಟಕೋಡಿ ಬಳಿ ನಡೆದಿದೆ.

ಇದನ್ನೂ ಓದಿ: 🟠ಉಪ್ಪಿನಂಗಡಿ: ಐಸಿರಿ ಮಹಿಳಾ ಮಂಡಳಿ ಕಲ್ಲೇರಿ, ಕರಾಯ ಇದರ ವತಿಯಿಂದ ಮಹಿಳಾ ದಿನಾಚರಣೆ ಹಾಗೂ


ಮೃತ ಬೈಕ್‌ ಸವಾರನನ್ನು ಮೂಲತಃ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ತಡವಲಗ ಗ್ರಾಮದ ಮುಲ್ಕಿ ಸಮೀಪದ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ನಿವಾಸಿ ರಾಹುಲ್ ಹನುಮಂತ ಡೊಂಬರ (20) ಎಂದು ಗುರುತಿಸಲಾಗಿದೆ.


ಗಾಯಾಳು ಸ್ಕೂಟರ್ ಸವಾರನನ್ನು ಎಕ್ಕೋಡಿ ಕಂಬಳಬೆಟ್ಟು ನಿವಾಸಿ ದೇವದಾಸ ಶೆಟ್ಟಿಗಾರ (56) ಎಂದು ತಿಳಿದು ಬಂದಿದೆ.
ಮೃತ ಬೈಕ್ ಸವಾರ ರಾಹುಲ್, ಕಟೀಲು ದೇವರ ದರ್ಶನ ಮುಗಿಸಿ ಮುಲ್ಕಿಯ ಲಿಂಗಪ್ಪಯ್ಯಕಾಡು ಕಡೆಗೆ ವಾಪಸಾಗುತ್ತಿದ್ದಾಗ ವಾಹನವೊಂದನ್ನು ಓವ‌ರ್ ಟೇಕ್ ಮಾಡುವ ರಭಸದಲ್ಲಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಿಂದ ಗಂಭೀರ ಗಾಯಗೊಂಡ ರಾಹುಲ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.


ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ರಾಹುಲ್ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ತಡವಲಗದಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾನೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಅಂಗಡಿಯೊಂದರ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *