ಬಂಟ್ವಾಳ:(ಮಾ.24) ರಸ್ತೆ ದಾಟುವ ವೇಳೆ ಪಿಕಪ್ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತುಂಬೆ ಎಂಬಲ್ಲಿ ರಾತ್ರಿ ವೇಳೆ ನಡೆದಿದೆ.

ಇದನ್ನೂ ಓದಿ: 🟣ಉಜಿರೆ: ನವೀಕರಣಗೊಳ್ಳಲಿರುವ ಉಜಿರೆ ಸಂತ ಅಂತೋನಿ ಚರ್ಚ್ ನ ಮುಖ್ಯ ಗೋಪುರದ ಶಿಲಾನ್ಯಾಸ ಕಾರ್ಯಕ್ರಮ
ಸ್ಥಳೀಯ ನಿವಾಸಿ ಮಹಾಬಲ (47) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ.
ಮಹಾಬಲ ಅವರು ತುಂಬೆ ವೈನ್ ಶಾಪ್ ಗೆ ಹೋಗಿ ಅಲ್ಲಿಂದ ಮನೆಗೆ ಹೋಗುವುದಕ್ಕೆ ರಸ್ತೆ ದಾಟುವ ವೇಳೆ ಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ಪಿಕಪ್ ವಾಹನ ಡಿಕ್ಕಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



ಪಾಣೆಮಂಗಳೂರು ಟ್ರಾಫಿಕ್ ಎಸ್.ಐ.ಸುತೇಶ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

