ಬೆಳ್ತಂಗಡಿ :(ಮಾ.24) ಕೆಎಸ್ ಆರ್ ಟಿಸಿ ಬಸ್ ಹಾಗೂ ಜೀಪ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಕೊಯ್ಯೂರು ಗ್ರಾಮದ ಬಾಸಮೆ ಎಂಬಲ್ಲಿ ನಡೆದಿದೆ.

ಅಪಘಾತದಿಂದ ಜೀಪು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ, ಜೀಪು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿಯಿಂದ ಕೊಯ್ಯೂರು ಕಡೆಗೆ ಹೋಗುವ ಜೀಪು ಮತ್ತು ಕೊಯ್ಯೂರು ನಿಂದ ಬೆಳ್ತಂಗಡಿ ಕಡೆ ಬರುವ ಸರಕಾರಿ ಬಸ್ ಡಿಕ್ಕಿ ಹೊಡೆದಿದೆ.


ಜೀಪು ಚಾಲಕ ಅಣ್ಣು ಪೂಜಾರಿ ರವರಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

