Thu. Apr 3rd, 2025

Dandeli: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಗ್ಯಾಸ್ ಸಿಲಿಂಡರ್ ಸಾಗಾಟ ವಾಹನ – ಚಾಲಕನಿಗೆ ಗಾಯ

ದಾಂಡೇಲಿ :(ಮಾ.25)ಗ್ಯಾಸ್ ಸಿಲಿಂಡರ್ ಗಳನ್ನು ಹೇರಿಕೊಂಡು ಬರುತ್ತಿದ್ದ ಗೂಡ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು, ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿಯಾಗಿ,

ಇದನ್ನೂ ಓದಿ: 🌀ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲ(ರಿ.) ಇವರ ವತಿಯಿಂದ

ಚಾಲಕನಿಗೆ ಗಾಯವಾದ ಘಟನೆ ಇಂದು ಮಂಗಳವಾರ ಬೆಳಿಗ್ಗೆ 9:30 ಗಂಟೆ ಸುಮಾರಿಗೆ ಹಳಿಯಾಳ – ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ಬರುವ ಆಲೂರು – ಕರ್ಕಾ ಮಧ್ಯೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಮ್ಮಿನಭಾವಿ ಗ್ರಾಮದ ನಿವಾಸಿ ವಿನಾಯಕ ಚ್ಯಾಟಿ ಎಂಬಾತನೇ ಗಾಯಗೊಂಡ ಚಾಲಕನಾಗಿದ್ದಾನೆ. ಅಪಘಾತದಲ್ಲಿ ಈತ ವಾಹನದೊಳಗಡೆ ಸಿಕ್ಕಿಹಾಕಿಕೊಂಡಿದ್ದು,

ಸ್ಥಳೀಯರು ವಾಹನದ ಬಾಗಿಲು ಮುರಿದು ಈತನನ್ನು ವಾಹನದಿಂದ ಕೆಳಗಿಳಿಸಿದ್ದಾರೆ. ತಕ್ಷಣವೇ ಈತನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಇದೀಗ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

Leave a Reply

Your email address will not be published. Required fields are marked *