Fri. Apr 4th, 2025

Belthangady: ಬೈಕ್‌ ರಸ್ತೆಗೆ ಬಿದ್ದು ಬೈಕ್‌ ಸವಾರ ಸಾವು!!

ಬೆಳ್ತಂಗಡಿ:(ಮಾ.27) ಬೆಳ್ತಂಗಡಿಯ ಚರ್ಚ್ ರೋಡ್ ನ ಕಲ್ಕಣಿ ಎಂಬಲ್ಲಿ ಕಾರನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಬೈಕ್‌ ರಸ್ತೆ ಬದಿಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಸವಾರ ಸಾವನ್ನಪ್ಪಿದ ಘಟನೆ ಮಾ.26 ರಂದು ನಡೆದಿದೆ.

ಇದನ್ನೂ ಓದಿ: ☘ವಾಮದಪದವು: (ಮಾ.30) ವಾಮದಪದವಿನಲ್ಲಿ “ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ” ಯ ನೂತನ ಶಾಖೆ ಶುಭಾರಂಭ


ಬೆಳ್ತಂಗಡಿ ಕಲ್ಲಗುಡ್ಡೆ ನಿವಾಸಿ ಸಯ್ಯದ್ ಪಾಶ(42) ಮೃತಪಟ್ಟವರು. ಸಯ್ಯದ್ ಪಾಶ ಅವರು ತಮ್ಮ ಬೈಕ್‌ನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಕಲ್ಕಣಿ ಬಳಿಯಲ್ಲಿ ಕಾರನ್ನು ಓವರ್ ಟೇಕ್ ಮಾಡುವ ಯತ್ನದಲ್ಲಿ ಅಪಘಾತ ಸಂಭವಿಸಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *