ಬೆಳ್ತಂಗಡಿ :(ಮಾ.28) ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ತುಂಬಿದ್ದ ಕಾರಣ ರಸ್ತೆ ಕಾಣದೆ ಮಲೆಯಮಾರುತ ತಿರುವಿನಲ್ಲಿ ಪ್ರವಾಸಿಗರ ಕಾರು ಪಲ್ಟಿಯಾದ ಘಟನೆ ಸಂಭವಿಸಿದೆ.

ಇದನ್ನೂ ಓದಿ: 💠ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ಸಿನಿಮಾಟೋಗ್ರಾಫಿಕ್ ಲೈಟಿಂಗ್ ಕಾರ್ಯಾಗಾರ
ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದವರ ಸ್ವಿಫ್ಟ್ ಕಾರು ರಸ್ತೆ ಕಾಣದೆ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ 60 ಅಡಿಗಳ ಪ್ರಪಾತಕ್ಕೆ ಕಾರು ಬಿದ್ದಿದೆ.
ಕಾರಿನಲ್ಲಿದ್ದ ಒಂದು ವರ್ಷದ ಮಗು ಸೇರಿದಂತೆ ಐವರು ಗಾಯಗೊಂಡಿದ್ದಾರೆ ಸ್ಥಳೀಯರ ಸಹಕಾರದೊಂದಿಗೆ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲಾಗಿದೆ.




ಗಾಯಗೊಂಡರನ್ನು ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
