Thu. Apr 3rd, 2025

Belthangady: ಬೆಳ್ತಂಗಡಿ ಶ್ರೀ ಧ.ಮಂ.ಆಂ.ಮಾಧ್ಯಮ ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಜೂನಿಯರ್ ರೆಡ್ ಕ್ರಾಸ್ ಪರೀಕ್ಷೆಯಲ್ಲಿ ತೇರ್ಗಡೆ

ಬೆಳ್ತಂಗಡಿ : (ಮಾ.29) ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಜೂನಿಯರ್ ರೆಡ್ ಕ್ರಾಸ್ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಜೂನಿಯರ್ ರೆಡ್ ಕ್ರಾಸ್ ಪರೀಕ್ಷೆಯಲ್ಲಿ ಬೃಂದಾ ಎಸ್ 8 ನೇ ತರಗತಿ ಇವರು ವಿಶಿಷ್ಟ ಶ್ರೇಣಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: ☘ಬೆಳ್ತಂಗಡಿ: ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ವಿದ್ಯಾರ್ಥಿಗಳಾದ ದೀಪ್ತಾ , ಜಸ್ವಿತಾ, ಸಂಪ್ರೀತ್, ಸಮ್ಯಕ್, ಶಿಯಾನ ಸೈಫಾ, ಶ್ರೀ ರಕ್ಷಾ, ಶ್ರೀತಾ ಎಸ್, ಶ್ರೀತನ್, ಸ್ಪಂದನ್, ತನಿಷಿ, ವಿನ್ಯಾಸ್ , ವೃಷಭ್, ಯಶಸ್ವಿ, ಎ ಕೆ ಮುಷ್ಪಿರಾ, ದಿಷಾ ಪೈ, ಪರಿಣಿತ, ಸಾನ್ವಿ, ಶೇಕ್ ಮನ್ಸೂರ್ ನಿಹಾದ್ ಪ್ರಥಮ ಶ್ರೇಣಿಯನ್ನು ಪಡೆದಿದ್ದಾರೆ.

ರಾಕೇಶ್ ಕೆ ದ್ವಿತೀಯ ಶ್ರೇಣಿಯನ್ನು ಪಡೆದಿರುತ್ತಾರೆ. ಜೂನಿಯರ್ ರೆಡ್ ಕ್ರಾಸ್ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಲಭಿಸಿರುತ್ತದೆ. ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಲತಾ ಎಂ ಆರ್ ರವರ ಮಾರ್ಗದರ್ಶನದಲ್ಲಿ ಜೂನಿಯರ್ ರೆಡ್ ಕ್ರಾಸ್ ಕೌನ್ಸಿಲರ್ ,

ಜಿಲ್ಲಾ ರೆಡ್ ಕ್ರಾಸ್ ಪ್ರೋಗ್ರಾಮ್ ಆರ್ಗನೈಸರ್ ಕಮಿಟಿ ಸದಸ್ಯರು ಶ್ರೀಮತಿ ಪ್ರಮೀಳಾ, ಹಾಗೂ ಶಿಕ್ಷಕರಾದ ಮಂಜುನಾಥ್ ರವರ ಸಹಕಾರದೊಂದಿಗೆ ವಿದ್ಯಾರ್ಥಿಗಳು ಜೂನಿಯರ್ ರೆಡ್ ಕ್ರಾಸ್ ಪರೀಕ್ಷೆಯನ್ನು ಬರೆಯುತ್ತಿದ್ದಾರೆ.

Leave a Reply

Your email address will not be published. Required fields are marked *