Thu. Apr 3rd, 2025

Bantwal: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಆಟೋರಿಕ್ಷಾ- ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸಾವು!!

ಬಂಟ್ವಾಳ :(ಎ.2) ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ದೈಕಿನಕಟ್ಟೆ ಎಂಬಲ್ಲಿ ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಹೋಗಿ ಮಗುಚಿ ಬಿದ್ದು ಗಂಭೀರ ಗಾಯಗೊಂಡು‌ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟ ಘಟನೆ ನಡೆದಿದೆ.

ಇದನ್ನೂ ಓದಿ: 🔴ಬಂಟ್ವಾಳ:(ಎ.5 – ಎ.6) ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘದ ರಜತ ಸಂಭ್ರಮ


ಮಂಗಳೂರು ದೇರೇಬೈಲ್ ಸಮೀಪದ ನೆಕ್ಕಿಲಗುಡ್ಡೆ ಮಾಲೆಮಾರ್ ನಿವಾಸಿ ರಾಮಣ್ಣ ನಾಯ್ಕ್ (63) ಮೃತಪಟ್ಟವರೆಂದು ಗುರುತಿಸಲಾಗಿದೆ.
ಇವರು ಸಂಬಂಧಿಕರ ಆಟೋರಿಕ್ಷಾವೊಂದರಲ್ಲಿ

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅಳಕೆಬೈಲುವಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ರಾತ್ರಿಯೇ ವಾಪಾಸ್ ಮಂಗಳೂರಿನತ್ತ ಬರುತ್ತಿದ್ದಾಗ ದೈಕಿನಕಟ್ಟೆ ಬಳಿ ಚಾಲಕ ನಿಯಂತ್ರಣ ತಪ್ಪಿ‌ ರಿಕ್ಷಾ ರಸ್ತೆಗೆ ಮಗುಚಿಬಿದ್ದಿದ್ದು,ಪರಿಣಾಮ ರಿಕ್ಷಾದಲ್ಲಿದ್ದ ರಾಮಣ್ಣ ಅವರು ರಿಕ್ಷಾದಡಿ‌ಗೆ ಸಿಲುಕಿ ಗಾಯಗೊಂಡಿದ್ದರು.


ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು‌.ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *