Sun. Apr 6th, 2025

Ujire: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕರಾಟೆ ತರಬೇತಿ

ಉಜಿರೆ:(ಎ.5) ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಒಂದಾದ ಕರಾಟೆ ತರಬೇತಿಯ ವಿದ್ಯಾರ್ಥಿಗಳಿಗೆ ಬೆಲ್ಟ್ ಪ್ರಮೋಷನ್ ಪರೀಕ್ಷೆಯು ಶಾಲಾ ಆವರಣದಲ್ಲಿ ನಡೆಸಲಾಗಿದ್ದು, ತೇರ್ಗಡೆ ಆದ ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: ⭕Murder Case: ಗಂಡನ ಕೊಲೆಯನ್ನು ವಿಡಿಯೋ ವಿಡಿಯೋ ಕಾಲ್ ​ನಲ್ಲಿ ನೋಡಿ ಆನಂದಪಟ್ಟ ಹೆಂಡ್ತಿ!!!

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪಠ್ಯೇತರ ಚಟುವಟಿಕೆಗಳ ಸಂಯೋಜಕ ಶಿಕ್ಷಕಿ ಶ್ರೀಮತಿ ಮಾಲಿನಿ ಜೈನ್ “ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯಿಂದ ಮಾನಸಿಕ ಹಾಗೂ ಬೌಧಿಕ ಬೆಳವಣಿಗೆ ಉತ್ತಮಗೊಳ್ಳುವುದು” ಎಂದು ಹಿತನುಡಿದು, ಸ್ಪರ್ಧೆಗಳಿಗೆ ತಯಾರಾಗುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಸೀನಿಯರ್ ಬೆಲ್ಟ್ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಕರಾಟೆ ಮುಖ್ಯ ತರಬೇತಿಗಾರ ಸೆನ್ಸಾಯಿ ವಸಂತ.ಕೆ ಬಂಗೇರ ಕರಾಟೆಯಿಂದ ವ್ಯಕ್ತಿಯ ಬದಲಾವಣೆ ಆರೋಗ್ಯ ರಕ್ಷಣೆ ದೇಹ ರಕ್ಷಣೆ ಲಾಭಗಳನ್ನು ಸವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕರಾಟೆ ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡಿದ್ದರು. ಶಿಕ್ಷಕಿ ರಾಜಮ್ಮ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *