Sat. Apr 19th, 2025

Kanyadi: ಕನ್ಯಾಡಿ ಸ.ಹಿ.ಪ್ರಾ.ಶಾಲೆಯ ಕುರಿತು ರಚಿಸಿದ “ಬಂದೆನು ಶಾಲೆಗೆ ಓಡೋಡಿ” ಹಾಡು ಬಿಡುಗಡೆ

ಕನ್ಯಾಡಿ:(ಎ.9) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿಯ ಕುರಿತಾಗಿ ಅಜಿತ್ ಪೂಜಾರಿ ಕನ್ಯಾಡಿಯವರು ರಚಿಸಿರುವ ಬಂದೆನು ಶಾಲೆಗೆ ಓಡೋಡಿ ಹಾಡಿನ ಬಿಡುಗಡೆ ಕಾರ್ಯಕ್ರಮ ಕನ್ಯಾಡಿ ಶಾಲೆಯಲ್ಲಿ ನಡೆಯಿತು. ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಶ್ರೀ ಮೋಹನ್ ಕುಮಾರ್ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ರಮೇಶ್ ಕಾರಂತ್ ಇವರು ಜೊತೆಗೂಡಿ ಬಿಡುಗಡೆಗೊಳಿಸಿದರು.

ಇದನ್ನೂ ಓದಿ: ⭕ಉಜಿರೆ: ಕೃತಿಕಾ ಹಾಗೂ ಪುಣ್ಯಶ್ರೀ ರವರ ಚಿಕಿತ್ಸೆಗೆ ನೆರವಾಗಿ

ಕಲಿತ ಶಾಲೆಗೆ ಒಬ್ಬ ಹಿರಿಯ ವಿದ್ಯಾರ್ಥಿಯಾಗಿ ಎಲ್ಲರಿಗೂ ಮಾದರಿಯಾಗುವಂತಹ ಕಾರ್ಯವನ್ನು ಶ್ರೀಯುತ ಅಜಿತ್ ಪೂಜಾರಿಯವರು ಮಾಡಿದ್ದಾರೆ ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಹಾಗೆಯೇ ಸರ್ಕಾರಿ ಶಾಲೆಗಳ ಉನ್ನತಿಗಾಗಿ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳನ್ನು ಸೇರಿಸಿ ಇನ್ನೊಂದು ಹಾಡು ಮಾಡಬೇಕೆಂದು ತಮ್ಮ ಇಂಗಿತ ವ್ಯಕ್ತಪಡಿಸಿದರು..ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕರಾದ ಶ್ರೀನಿವಾಸ್ ರಾವ್ ಮಾತನಾಡಿ ಶಾಲೆಯೊಂದಿಗೆ ಮಕ್ಕಳು ಹಾಗೂ ಪೋಷಕರನ್ನು  ಭಾವನಾತ್ಮಕವಾಗಿ ಬೆಸೆಯುವಂತಹ ಅದ್ಭುತವಾದ ಶಕ್ತಿ ಈ ಹಾಡಿನಲ್ಲಿ ಇದೆ ಎಂದು  ತಮ್ಮ ಅಭಿಪ್ರಾಯ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಕೇಸರಿಯವರು ಮಾತನಾಡಿ ಬಂದೆನು ಶಾಲೆಗೆ ಓಡೋಡಿ ಹಾಡು ಮುಂದಕ್ಕೆ ಬಂದೆನು ಸರಕಾರಿ ಶಾಲೆಗೆ ಓಡೋಡಿ ಎನ್ನುವ ರೀತಿಯಲ್ಲಿ ಈ ಹಾಡು ಕಾರಣೀಭೂತವಾಗುತ್ತದೆ ಹಾಗೂ ಒಬ್ಬ ಶಾಲೆಯ ಹಳೆವಿದ್ಯಾರ್ಥಿಯಾಗಿ ಅಜಿತ್ ಪೂಜಾರಿ ಕನ್ಯಾಡಿಯವರದ್ದು ನಿಜವಾಗಿಯೂ ಸ್ಫೂರ್ತಿ ಹಾಗೂ ಮಾದರಿಯ ಕೆಲಸ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ದೊಂಡೋಲೆ ಮನೆಯ ಶ್ರೀ ಪುರಂದರ ರಾವ್,ಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮನೋಹರ್ ರಾವ್,ಸುದ್ದಿ ವಾಹಿನಿಯ ಪ್ರಮುಖರು ದಾಮೋದರ್ ದೊಂಡೋಲೆ, ನಿವೃತ್ತ ದೈಹಿಕ ಶಿಕ್ಷಕರಾದ ರಮೇಶ್ ಕಾರಂತ್,ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರು ಪ್ರೀತಮ್ ಡಿ ಧರ್ಮಸ್ಥಳ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಶ್ರೀ ನಂದ ಕೆ ಹಾಗೂ ಶಾಲಾ ಮುಖ್ಯ ಶಿಕ್ಷಕರು ಶ್ರೀಮತಿ ಪುಷ್ಪಾ ಎನ್ ಉಪಸ್ಥಿತರಿದ್ದರು.


ಶಾಲಾ ಅಧ್ಯಾಪಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರ ಪ್ರಯತ್ನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಜಿತ್ ಪೂಜಾರಿ ಅವರನ್ನು ಆಶೀರ್ವಾದ ಪೂರ್ವಕವಾಗಿ ಶಾಲೆಯ ವತಿಯಿಂದ ಗೌರವಿಸಲಾಯಿತು.
ನಿರೂಪಣೆಯನ್ನು ಶ್ರೀ ಸುಬ್ರಾಯ ಅಕ್ಷಯ್ ನಗರ ಹಾಗೂ ಸುದರ್ಶನ ಕೆ ವಿ ಯವರು ಧನ್ಯವಾದ ನೀಡಿದರು.

ಹಾಡಿನ ಲಿಂಕ್ ನೀಡಲಾಗಿದೆ ಕೇಳಿ, ನೋಡಿ ಆನಂದಿಸಿ ಎಲ್ಲರಿಗೂ ಕಳುಹಿಸಿ:

‪https://youtu.be/Z8a6SR2B0BE?si=7YAUmI58VJuBGnFp‬

Leave a Reply

Your email address will not be published. Required fields are marked *