Sat. Apr 19th, 2025

Kadaba: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ವೇದಿಕೆಗೆ ನುಗ್ಗಿ ಅರ್ಥಧಾರಿಯ ಮೈಮೇಲೆ ಎರಗಿದ ವ್ಯಕ್ತಿ!!!

ಕಡಬ:(ಎ.೧೭) ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಏಕಾಏಕಿ ಸಭೆಯಲ್ಲಿದ್ದ  ವ್ಯಕ್ತಿಯೋರ್ವರು ವೇದಿಕೆಗೆ ನುಗ್ಗಿ ಅರ್ಥಧಾರಿಯ ಮೈಮೇಲೆ ಎರಗಿದ ಘಟನೆ ನಡೆದಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.

ಇದನ್ನೂ ಓದಿ: ⭕Mangaluru: ಮೆಹಂದಿ ಹಾಕಲೆಂದು ಬ್ಯೂಟಿಪಾರ್ಲರ್‌ಗೆ ಹೋದ ವಧು ನಾಪತ್ತೆ!!

ಕಡಬದ ನಂದುಗುರಿ ಎಂಬಲ್ಲಿ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಎಂಬವರ ಮನೆಯಲ್ಲಿ  ಸೇವಾರ್ಥವಾಗಿ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು.  ವಿದ್ಯುನ್ಮಾಲಿ ಹಾಗೂ ಅಧಿತಿ ಸಂಭಾಷಣೆ ನಡೆಯುತ್ತಿದ್ದ  ಈ ವೇಳೆ  ಸಭೆಯಿಂದ ಏಕಾಏಕಿ ಓಡೋಡಿ ಬಂದ ವ್ಯಕ್ತಿಯೋರ್ವರು ಅರ್ಥಧಾರಿಯ ಮೇಲೆ ಎರಗಿದ್ದಾರೆ.

ಏಕಾಏಕಿ ವೇದಿಕೆ ಮೇಲೆ ಹಾರಿ ಬಂದ ವ್ಯಕ್ತಿಯ ವರ್ತನೆಯಿಂದ   ಕಲಾವಿದರು , ಪ್ರೇಕ್ಷಕರು ದಿಗ್ಬ್ರಮೆಗೊಳಗಾಗಿ ಗಲಿಬಿಲಿಗೊಂಡಿದ್ದಾರೆ.  ಕೂಡಲೇ ಆತನನ್ನು ತಡೆದು ಇತರರ ಸಹಕಾರದಿಂದ. ಎಳೆದುಕೊಂಡು ದೂರ ಹೋಗಿರುವುದು ವೀಡಿಯೋದಲ್ಲಿದೆ.

ವೇದಿಕೆಗೆ ನುಗ್ಗಿದ ವ್ಯಕ್ತಿ ಸ್ಥಳೀಯ ನಿವಾಸಿ ರಾಧಾಕೃಷ್ಣ ಎಂದು ಗುರಿತಿಸಲಾಗಿದ್ದು  ಮೈ ಮೇಲೆ ಆವೇಶ ಬಂದ ರೀತಿಯಲ್ಲಿ ವರ್ತಿಸಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.

Leave a Reply

Your email address will not be published. Required fields are marked *