ಉಜಿರೆ:(ಎ.17) ಬೈಕ್ ಹಾಗೂ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಉಜಿರೆಯ ಪೆಟ್ರೋಲ್ ಪಂಪ್ ಹತ್ತಿರ ಎ.16 ರಂದು ನಡೆದಿದೆ.

ಇದನ್ನೂ ಓದಿ: ⭕ಉಜಿರೆ: ಉಜಿರೆ ಅನುಗ್ರಹ ಪಿ.ಯು.ಕಾಲೇಜಿನಲ್ಲಿ ಕಳ್ಳತನ ಪ್ರಕರಣ
ಚಾರ್ಮಾಡಿ-ಉಜಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಜಿರೆಯಿಂದ ಚಾರ್ಮಾಡಿ ಕಡೆಗೆ ಪ್ರಯಾಣ ಮಾಡುತ್ತಿದ್ದ ರಿಕ್ಷಾ ಹಾಗೂ ಉಜಿರೆಗೆ ಪ್ರಯಾಣ ಮಾಡುತ್ತಿದ್ದ ಬೈಕ್ ನಡುವೆ ಅಪಘಾತವಾಗಿದೆ.




ಪೆಟ್ರೋಲ್ ಪಂಪ್ ಕಡೆಗೆ ತಿರುಗಿಸುವ ವೇಳೆ ರಿಕ್ಷಾಗೆ ಎದುರಿನಿಂದ ಬಂದ ಬೈಕ್ ಗುದ್ದಿದೆ. ಪರಿಣಾಮ ರಿಕ್ಷಾದ ಮುಂಭಾಗ, ರಿಕ್ಷಾ ಸವಾರನಿಗೆ ಗಂಭೀರ ಗಾಯವಾಗಿದ್ದು, ಈತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
