Chakravarthy Sulibele: ಕಾಶ್ಮೀರ ಸರಿ ಹೋಗುವ ಜಾಗವಲ್ಲ ಅಂತ ಅನೇಕ ಬಾರಿ ಅನ್ನಿಸಿದೆ. ಮುಸ್ಲಿಮರು ನಂಬಿಕೆಗೆ ಅರ್ಹರಲ್ಲ. ದೇಶದ ಇತರ ಭಾಗದ ಜನರ ದುಡ್ಡಲ್ಲೇ ಕಾಶ್ಮೀರಿ ಮುಸ್ಲಿಮರು ಜೀವನ ಮಾಡುತ್ತಿರೋದು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಇದನ್ನೂ ಓದಿ: 🟠ಬೆಳ್ತಂಗಡಿ: ನವೀಕೃತ ತಾಲೂಕು ಪಶು ಆಸ್ಪತ್ರೆಯ ಆಪರೇಷನ್ ಥಿಯೇಟರ್ ಉದ್ಘಾಟನಾ ಕಾರ್ಯಕ್ರಮ
ಕಾಶ್ಮೀರದಲ್ಲಿ ಪ್ರವಾಸಿಗರ ಮೇಲಿನ ದಾಳಿ ಕುರಿತು ಮಾತನಾಡಿದ ಅವರು, ಕಾಶ್ಮೀರ ಸರಿ ಹೋಗುವ ಜಾಗವಲ್ಲ ಅಂತ ಅನೇಕ ಬಾರಿ ಅನ್ನಿಸಿದೆ. ಮುಸ್ಲಿಮರು ನಂಬಿಕೆಗೆ ಅರ್ಹರಲ್ಲ. ದೇಶದ ಇತರ ಭಾಗದ ಜನರ ದುಡ್ಡಲ್ಲೇ ಕಾಶ್ಮೀರಿ ಮುಸ್ಲಿಮರು ಜೀವನ ಮಾಡುತ್ತಿರೋದು. ಕೊಲೆ ಮಾಡೋಕೆ ಪಾಕಿಸ್ತಾನದಿಂದಲೇ ಬರಬೇಕಿಲ್ಲ. ಅಲ್ಲಿನ ಸ್ಥಳೀಯರೇ ಹೇಳುವ ಪ್ರಕಾರ ಒಳಗೆಯೇ ಜಮಾತ್ ತಂಡ ಕಟ್ಟುತ್ತಿದೆ ಎಂದು ಬಾಂಬ್ ಸಿಡಿಸಿದ್ದಾರೆ.


ಯಾರಿಂದ ಬದುಕಿದ್ದೀರೋ ಅವರನ್ನೇ ನಾಶ ಮಾಡಿ ಸರ್ಕಾರಕ್ಕೆ ಸಂದೇಶ ಕೊಡುವ ಯತ್ನ ಇದು. ವ್ಯಕ್ತಿ ಮುಸ್ಲಿಂ ಅಲ್ಲ ಅಂತಾ ಕನ್ಪರ್ಮ್ ಮಾಡಿಕೊಂಡು ಕೊಲೆ ಮಾಡಿದ್ದಾರೆ. ಇದು ಹೇಯ ಕೃತ್ಯ. ಮಾನವೀಯ ಇಲ್ಲದ ದುಷ್ಟ ಜನಾಂಗ ಅದು. ಘಟನೆ ಬಳಿಕವು ಯಾವ ಮುಸ್ಲಿಂ ಮಾತನಾಡುತ್ತಿಲ್ಲ. ಮುಸ್ಲಿಂ ಮೂಲವಾಧಿಗಳು. ಭಾರತೀಯ ಸಂಸ್ಕೃತಿ, ಕಾನೂನು ಸಂವಿಧಾನ ಯಾವುದನ್ನು ಅವರು ಒಪ್ಪಲ್ಲ. ಪ್ರಪಂಚದ ಟೆರರಿಸ್ಟ್ ಲೀಸ್ಟ್ ಮಾಡಿ 99% ಮುಸ್ಲಿಮರೇ ಇರ್ತಾರೆ. ಪ್ಯಾಂಟ್ ಬಿಚ್ಚಿ ಕತ್ನಾ ಆಗಿದೀಯಾ ಅಂತ ಪರಿಶೀಲಿಸಿ ಕೊಲೆ ಮಾಡ್ತಾರೆ ಅಂದ್ರೆ ಇವರು ಎಷ್ಟು ಕ್ರೂರಿಗಳು ಎಂದು ಕೆಂಡಾಮಂಡಲವಾದರು.

ಸರ್ಕಾರಕ್ಕೆ ಎಚ್ಚರಿಕೆ ಕೊಡಲು ಈ ಕೆಲಸ ಮಾಡಿದ್ದಾರೆ. ಜನರ ಜೀವಕ್ಕೆ ಸರ್ಕಾರ ಗ್ಯಾರಂಟಿ ಕೊಡಬೇಕು. ಪ್ರಧಾನಿಗಳು, ಅಮಿತ್ ಶಾ ಕೂಡ ಈ ಬಗ್ಗೆ ಹೇಳಬೇಕು. ಕಾಶ್ಮೀರ ಎಷ್ಟು ಸೇಫ್ ಅಂದ್ರೆ ಕಳೆದ ವರ್ಷಕ್ಕಿಂತ ಈ ವರ್ಷ ಭಯೋತ್ಪಾದನೆ ಚಟುವಟಿಕೆ ಕಡಿಮೆ ಅನ್ನೋದೆ ಸೇಫ್ಟಿನಾ..? ಅಲ್ಲಿನ ಜನರೇ ಉಗ್ರರನ್ನು ಹಿಡಿದು ಬಡಿಯಬೇಕು.

ಊಟ ಬೇಕು ಅಂದ್ರೆ ದೇಶದ ಇತರೆ ಜನ ಬೇಕು. ಕಾಶ್ಮೀರ ಜನರ ಒಳ್ಳೇತನ ಕೂಡ ಕಾಡುತ್ತೆ. ವಕ್ಫ್ ವಿಚಾರಕ್ಕೆ ಇದು ಆದ ಕೃತ್ಯದಂತಿಲ್ಲ. ಅಲ್ಲಿನ ಜನ ವಕ್ಫ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪಾಕಿಸ್ತಾನದಲ್ಲಿನ ಭಯೋತ್ಪಾದಕರನ್ನು ಸೈಲೆಂಟಾಗಿ ಅನೌನ್ ಗನ್ ಮ್ಯಾನ್ ಗಳು ಕೊಲೆ ಮಾಡಿದ್ದಾರೆ. ಇದು ಅಸ್ತಿತ್ವಕ್ಕೆ ಪ್ರಶ್ನೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕೃತ್ಯದ ಮೂಲಕ ಭಯೋತ್ಪಾದನೆ ಹೆಸರಲ್ಲಿ ಹಣ ಮಾಡೋಕು ಮಾಡಿರಬಹುದು. ಆದರೆ ಶೀಘ್ರ ಭಾರತ ಪ್ರತ್ಯುತ್ತರ ನೀಡಲಿದೆ. ಅಮೇರಿಕದ ಉಪಾಧ್ಯಕ್ಷ ನಮ್ಮ ದೇಶದಲ್ಲೇ ಇದ್ದಾರೆ. ಪಾಕಿಸ್ತಾನಕ್ಕೆ ಅಮೆರಿಕ ಜೊತೆ ಸೇರಿ ಬುದ್ದಿ ಕಲಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
