ಗುಂಡ್ಯ:(ಎ.28) ಲಾರಿ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಜೈಪುರ ಮೂಲದ ಅಬ್ದುಲ್ ಶುಕ್ರು ಚೌಧರಿ ಮೃತ ವ್ಯಕ್ತಿ.

ಇದನ್ನೂ ಓದಿ: ⭕ಮಂಗಳೂರು: ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ..!!
ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಹುಂಡೈ ಕಂಪನಿಯ ಕಾರು ಹಾಗೂ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಮಿನಿ ಲಾರಿ ನಡುವೆ ಬರ್ಚಿನಹಳ್ಳದಲ್ಲಿ ಡಿಕ್ಕಿ ಸಂಭವಿಸಿದೆ.




