ಧರ್ಮಸ್ಥಳ:(ಮೇ.5) ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದ ಮಹಿಳೆಯ ಬ್ಯಾಗ್ ನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಎಗರಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 💐ಬೆಳ್ತಂಗಡಿ: ಸರಕಾರಿ ಪ್ರೌಢ ಶಾಲೆ ಅರಸಿನಮಕ್ಕಿ ಶಾಲೆಗೆ 86.84% ಫಲಿತಾಂಶ
ಬ್ಯಾಗಿನಲ್ಲಿದ್ದ 97ಗ್ರಾಂ ತೂಕದ 6,79,000 ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿದೆ. ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ತೆರಳುವ ವೇಳೆ ಚಿನ್ನಾಭರಣಗಳನ್ನು ತನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟಿದ್ದರು.
ದೇವರ ದರ್ಶನ ಮುಗಿಸಿ ಬರುವಾಗ ಬ್ಯಾಗ್ ನೋಡಿದಾಗ ಬ್ಯಾಗಿನ ಜಿಪ್ ತೆರೆದಿರುವುದು ಕಂಡು ಬಂದಿದೆ. ಬ್ಯಾಗಿನ ಒಳಗೆ ನೋಡಿದಾಗ ಚಿನ್ನಾಭರಣಗಳು ಇರಲಿಲ್ಲ ಎಂದು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





