ಪುತ್ತೂರು:(ಮೇ.22) ಮಹಿಳೆಯನ್ನು ಕೋಣೆಯಲ್ಲಿ ಹಾಕಿ ದಿಗ್ಭಂಧನ ಮಾಡಿದ ಘಟನೆ ನಿನ್ನೆ ತಡರಾತ್ರಿ ಪುತ್ತೂರಿನ ಪರ್ಲಡ್ಕದಲ್ಲಿ ನಡೆದಿದೆ. ಹಿಂದೂ ಸಂಘಟನೆಗಳಿಂದ ಪೋಲೀಸರಿಗೆ ಮಾಹಿತಿ ತಿಳಿದು ಮಹಿಳೆಯ ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ⭕Madenuru Manu: ಕನ್ನಡ ಕಿರುತೆರೆ ನಟಿಯ ಮೇಲೆ ಅತ್ಯಾಚಾರ
ಕಡಬ ತಾಲೂಕಿನ ಮಹಿಳೆಯೊಬ್ಬರು ಸವಣೂರಿನ ಯುವಕನೊಂದಿಗೆ ಆತ್ಮೀಯತೆ ಹೊಂದಿದ್ದು ಪುತ್ತೂರಿನ ಪರ್ಲಡ್ಕ ದ ಕೊಠಡಿಗೆ ಬಂದಿದ್ದಳು. ಕತ್ತಲೆಗೆ ಯುವಕ ಮನೆಗೆ ಹೋಗುವುದಾಗಿ ಹೇಳಿ ಬೀಗ ಹಾಕಿ ಹೋಗಿದ್ದಾನೆ.
ತುಸು ಸಮಯದ ಬಳಿಕ ಬೇರೊಬ್ಬರು ಅಲ್ಲಿಗೆ ಬಂದಾಗ ಬೀಗ ಹಾಕಿರುವುದು ಕಂಡು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.




ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಬೀಗ ಹಾಕಲಾಗಿದ್ದ ಕೊಠಡಿಯಿಂದ ಮಹಿಳೆಯನ್ನು ರಕ್ಷಿಸಿದ್ದಾರೆ.

