Mon. Jan 12th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

Sridhar Nayak : ಶ್ರೀಧರ್ ಬಗ್ಗೆ ಶಾಕಿಂಗ್ ವಿಚಾರ ಬಿಚ್ಚಿಟ್ಟ ಪತ್ನಿ!

Sridhar Nayak :(ಮೇ.28) ಪಾರು ಸೇರಿದಂತೆ ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಶ್ರೀಧರ್‌ ನಾಯಕ್‌ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಅವರು ಪತ್ನಿ, ಮಗನ ವಿರುದ್ಧ ಆರೋಪ ಮಾಡಿದ್ದರು. ಈಗ ಈ ವಿಚಾರವಾಗಿ ಪತ್ನಿ ಜ್ಯೋತಿ ಮಾತನಾಡಿದ್ದಾರೆ.

ಇದನ್ನೂ ಓದಿ: ⭕Puttur: ಯುವಕನ ಮೇಲೆ ಬಿಯರ್‌ ಬಾಟಲಿಯಿಂದ ಹಲ್ಲೆ!

ಶ್ರೀಧರ್‌ ನನಗೆ ಹೊಡೆಯುತ್ತಿದ್ದ:


ಶ್ರೀಧರ್ ನನಗೆ ಹೊಡೆದಾಗಲೂ ಕೂಡ, ನೋವು ತಿಂದು, ಬೆಳಗ್ಗೆ ಮಾರನೇ ದಿನ ಮತ್ತೆ ನೀಟ್‌ ಆಗಿ ಸೀರೆ ಉಟ್ಟು ಕಾಲೇಜ್‌ಗೆ ಹೋಗಿ ಮಕ್ಕಳಿಗೆ ಪಾಠ ಮಾಡಿದ್ದಿದೆ. ಅವನು ನನಗೆ ಓದಿಸಿಲ್ಲ, ನಾನು ಸೆಕೆಂಡ್ ಪಿಯುಸಿಯಿಂದ ಕೆಲಸ ಮಾಡ್ತಿದೀನಿ. ಆದರ್ಶ ಫಿಲ್ಮ್ಸ್ ಇನ್‌ಸ್ಟಿಟ್ಯೂಟ್ ಬಿಟ್ಟಮೇಲೆ ನಾನು ಸೆಕೆಂಡ್ ಪಿಯುಸಿ ಓದಿದ ಬಳಿಕ ಶೇಷಾದ್ರಿಪುರ ಇಂಜಿನಿಯರಿಂಗ್ ಕಾಲೇಜ್ ಜಾಯಿನ್ ಆಗಿ, ಕೆಲಸ ಮಾಡ್ಕೊಂಡೆ ಓದುತ್ತಿದ್ದೆ.

ಶ್ರೀಧರ್‌ ನನಗೆ ಓದಿಸಿಲ್ಲ, ನಾನೇ ಅವನನ್ನೂ ಕೆಲಸಕ್ಕೆ ಸೇರಿಸಿದ್ದೆ:


ಶೇಷಾದ್ರಿಪುರಂ ಕಾಲೇಜಿಗೆ ಜಾಯಿನ್ ಆಗಿ ಆರು ತಿಂಗಳ ನಂತರ ಶ್ರೀಧರನನ್ನು ಕೂಡ ಅಲ್ಲೇ ಕರ್ಕೊಂಡು ಬಂದು ಸೇರಿಸಿದ್ದೆ. ನಾನು ಯಾವಾಗಲೂ ವರ್ಕ್ ಮಾಡ್ತಾ ಇದ್ದೀನಿ. ಪ್ರೆಗ್ನೆನ್ಸಿ ಟೈಮ್‌ನಲ್ಲಿ ನನಗೆ ವೀಕ್ನೆಸ್ ಇದ್ದಿದ್ದರಿಂದ ಬ್ಲೀಡಿಂಗ್ ಇತ್ತು. ಹೀಗಾಗಿ ಆರು ತಿಂಗಳು ನನಗೆ ಕೆಲಸ ಮಾಡೋದಿಕ್ಕೆ ಆಗಲಿಲ್ಲ. ಆಮೇಲೆ ಡೆಲಿವರಿ ಆಗಿ ನನ್ನ ಮಗು ಮೂರು ವರ್ಷ ಆಗುವರೆಗೂ ನಾನು ಕೆಲಸ ಮಾಡಿಲ್ಲ. ಆಮೇಲೆ ನಾನು ಕೆಲಸ ಮಾಡಿಕೊಂಡು ಬಂದೆ. ನನಗೆ ಯಾರು ಓದಿಸಿಲ್ಲ, ನನಗೆ ಓದಬೇಕು ಅನ್ನೋ ಹಂಬಲ ಇತ್ತು.

ನನ್ನ ಬದುಕಿನಲ್ಲಿ ಪರಪುರುಷ ಇಲ್ಲ:

ಶ್ರೀಧರ್‌ಗೆ ನಾನು ಡಿಗ್ರಿಯನ್ನು ಕಟ್ಟಿಸಿದೆ, ಒಂದು ವರ್ಷ ಬರೆದ ಅವನು ಇನ್ನೊಂದು ವರ್ಷ ಇಷ್ಟ ಇಲ್ಲ ಅಂತ ಅಂದ. ನಾನು ಯಾರನ್ನೋ ಕಟ್ಕೊಂಡು ಹೋದೆ ಅಂತ ಶ್ರೀಧರ್‌ ಹೇಳಿದ್ದಾನೆ, ನಾನು ಎಂದಿಗೂ ಆ ದಾರಿ ಹಿಡಿದಿಲ್ಲ. ನಾನು, ನನ್ನ ಮಗನ ಜೊತೆ ವಾಸ ಮಾಡುತ್ತಿದ್ದೇನೆ, ನನ್ನ ಬದುಕಿನಲ್ಲಿ ಯಾರೂ ಇಲ್ಲ.

ನನ್ನ ಆಯ್ಕೆ ತಪ್ಪಾಗಿದೆ:

ಇಷ್ಟೊಂದು ಘೋರ ಯಾರದ್ದಾದರೂ ಜೀವನದಲ್ಲಿ ಟ್ರಾಜಿಡಿ ನಡೆಯಬಹುದು ಅಂತ ಅಂದುಕೊಂಡಿರಲಿಲ್ಲ, ಇದು ನನ್ನ ಜೀವನದಲ್ಲಿ ನಡೆದಿದೆ, ಇವತ್ತು ನಾನು ಇದನ್ನು ಅನುಭವಿಸ್ತಿದೀನಿ. ನೀವು ಯಾರೂ ನನ್ನ ತರ ಹುಚ್ಚರಲ್ಲ ಅಥವಾ ಬಾಲಿಶರಲ್ಲ. ದಯವಿಟ್ಟು ವಿಚಾರ ಮಾಡಿ, ನಿರ್ಧಾರ ತಗೊಳ್ಳಿ. ನನ್ನ ಆಯ್ಕೆ ತಪ್ಪಾಗಿದೆ ಎಂದು ಹೇಳೋದಿಕ್ಕೆ ನನಗೆ ಮುಜುಗರ ಆಗ್ತಿದೆ.

ನಾನು ಅವನ ಕ್ಯಾರೆಕ್ಟರ್ ಮೇಲೆ ಯಾವತ್ತು ಸಂಶಯ ಪಟ್ಟಿಲ್ಲ. ನಮ್ಮ ತಾಯಿ ಒಂದೆರಡು ಸಲ ಯಾವ ಗಂಡಸು ಹೀಗೆ ಮನೇಲಿ ಕಿತ್ತಾಡಲ್ಲ ಜಗಳಾಡಲ್ಲ. ನಾವಿಬ್ಬರೂ ಗಂಡ ಹೆಂಡತಿಯ ಥರ ಇರಲಿಲ್ಲ. ನನ್ನ, ಅವನ ಮಧ್ಯೆ ಸಾಕಷ್ಟು ವರ್ಷಗಳಿಂದ ಯಾವುದೇ ಸಂಬಂಧ ಇರಲಿಲ್ಲ. ಶ್ರೀಧರ್‌ಗೆ ಎಚ್‌ಐವಿ ಇತ್ತು, ಎರಡು ತಿಂಗಳ ಹಿಂದೆ ನನಗೆ ಆ ರಿಪೋರ್ಟ್‌ ಸಿಕ್ಕಿದೆ. ಸಾಕಷ್ಟು ಡಾಕ್ಟರ್‌ ಬಳಿ ಈ ಕಾಯಿಲೆ ವಾಸಿ ಆಗತ್ತಾ ಅಂತ ಕೇಳಿದಾಗ ಅವರು ಪ್ರಯೋಜನ ಇಲ್ಲ ಅಂದರು. ಸಾಕಷ್ಟು ಜನರ ಜೊತೆ ಲೈಂಗಿಕ ಸಂಬಂಧ ಹೊಂದಿದಾಗ ಮಾತ್ರ ಈ ರೀತಿ ಆಗುವುದು. ನನ್ನ ಬಳಿ ಈಗ ಈ ರಿಪೋರ್ಟ್‌ ಇದೆ. ಶ್ರೀಧರ್‌ ಯಾವಾಗ ಈ ಚಟಕ್ಕೆ ಬಿದ್ದನೋ ಗೊತ್ತಿಲ್ಲ.

ಶ್ರೀಧರ್‌ಗೆ HIV ಬರೋಕೆ ನಾನು, ನನ್ನ ಮಗ ಕಾರಣ ಅಲ್ಲ:

ನಾನು ಆರ್ಟಿಸ್ಟ್, ನಾನು ತುಂಬಾ ಸ್ಮಾರ್ಟ್ ಅನ್ನೋದು ಅವನ ತಲೆಯಲ್ಲಿತ್ತು. ಅವನಿಗೆ ಅಹಂಕಾರ ಇತ್ತು. ತಂದೆ-ತಾಯಿ, ಅಣ್ಣ, ತಮ್ಮ ಅಕ್ಕ, ತಂಗಿ, ಹೆಂಡತಿ, ಮಗು ಎಲ್ಲವನ್ನೂ ಹೊಂದಿದ್ದ ಶ್ರೀಧರ್‌ ಇಂದು ಎಲ್ಲರನ್ನು ಕಳೆದುಕೊಂಡಿದ್ದಾನೆ, ದೇವರು ಅವನಿಗೆ ಎಲ್ಲವನ್ನು ಕೊಟ್ಟಿದ್ದ, ಒಳ್ಳೆಯ ಕೆಲಸವೂ ಇತ್ತು, ಒಳ್ಳೆ ಹೆಸರು ದೇವರು ಕೊಟ್ಟಿದ್ದ. ಸ್ವಲ್ಪ ಅವನಿಗೆ ಎಲ್ಲವೂ ಕೊಟ್ಟಮೇಲೂ ಕೂಡ ಅವನು ಕಳೆದುಕೊಂಡ. ಶ್ರೀಧರ್‌ಗೆ ಎಚ್‌ಐವಿ ಬರೋಕೆ ನಾನಾಗಲೀ, ನನ್ನ ಮಗ ಆಗಲೀ ಕಾರಣ ಅಲ್ಲ, ಅದನ್ನು ಅವನೇ ತಂದುಕೊಂಡಿದ್ದು.

ನನ್ನ ಐದು ವರ್ಷದ ಮಗ ಹೇಗೆ ಮೋಸ ಮಾಡ್ತಾನೆ?:

ಯಾವುದೋ ಒಂದು ವಿಡಿಯೋದಲ್ಲಿ ಐದು ವರ್ಷದ ಮಗ ಅವನು ಮೋಸ ಮಾಡಿ ಹೋದ ಅಂತ ಹೇಳಿದ್ದಾನೆ. ಐದು ವರ್ಷದ ಮಗು ಏನಂತ ತಾನೇ ಮೋಸ ಮಾಡಲಿಕ್ಕೆ ಸಾಧ್ಯ? ಶ್ರೀಧರ್‌ ಮಗನಿಗೆ ಒಂದು ಸೈಕಲ್ ಕೊಡಿಸಿದ್ದ. ಆ ಸೈಕಲ್‌ನ್ನು ನನ್ನ ಮಗ ತಗೊಂಡು ಬಂದಿದ್ದ. ಮೂರು ದಿನ ಬಿಟ್ಟು ನನಗೆ ಶ್ರೀಧರ್‌ ಫೋನ್‌ ಮಾಡಿ ಎಲ್ಲ ತಗೊಂಡು ಹೋಗ್ಬಿಟ್ಟಿದ್ದೀರಾ ಅಂತ ಹೇಳಿದ್ದ. ಮಗುಗೆ ಅದು ತನ್ನ ಸೈಕಲ್, ಆಟಿಕೆ ಸಾಮಾನು ಅಂತ ತಗೊಂಡು ಬಂದುಬಿಡುತ್ತೆ. ನಾನು ಒಂದು ಉದಾಹರಣೆಗೆ ಹೇಳಿದ್ದು ಈ ತರದ್ದು ಕೋಟಿಗಟ್ಟಲೆ ಮಾತು ಇದೆ.

ಕಾಮನ್‌ ಸೀರೆ, ಮಲ್ಲಿಗೆ ಹೂ ಬಿಟ್ಟು ಏನೂ ಕೇಳಿಲ್ಲ:


ಇಡೀ 11 ವರ್ಷ ಜೀವನದಲ್ಲಿ ಶ್ರೀಧರ್ ಹತ್ರ ನಾನು ಎರಡು ಸಲ ಸೀರೆ ಕೇಳಿದೀನಿ. ಅದು ಕಾಮನ್ ಸೀರೆ, ರೇಷ್ಮೆ ಸೀರೆ ಅಲ್ಲ. ನಾಲ್ಕು ಬಾರಿ ಹೂವಿನ ಮಾಲೆ ಕೇಳಿರಬಹುದು. ಅದನ್ನ ಬಿಟ್ಟು ನಾನು ಅವನಿಗೆ ಎಂದೂ ಕೂಡ ತಿನ್ನೋದಿಕ್ಕೆ ಒಂದು ಐಸ್ ಕ್ರೀಮ್ ಕೂಡ ತಂದುಕೊಡು ಅಂತ ಕೇಳಲಿಲ್ಲ. ನಾನು ಅವನಿಂದ ಆತರದ್ದು ಏನು ನಿರೀಕ್ಷೆಯೇ ಮಾಡಿಲ್ಲ.

Leave a Reply

Your email address will not be published. Required fields are marked *