Sat. Jun 28th, 2025

Mulki: ಸಹೋದರನ ಅಂತಿಮ ಕಾರ್ಯಕ್ರಮಗಳಿಗೆ ಊರಿಗೆ ಬಂದಿದ್ದ ಸಹೋದರಿಯ ದಾರುಣ ಅಂತ್ಯ – ಅಷ್ಟಕ್ಕೂ ಆಗಿದ್ದೇನು..?

ಮಂಗಳೂರು:(ಜೂ. ೨೮) ಸಹೋದರನ ಅಂತಿಮ ಕಾರ್ಯಕ್ರಮಗಳಿಗೆ ಊರಿಗೆ ಬಂದಿದ್ದ ಸಹೋದರಿಯ ದಾರುಣ ಅಂತ್ಯವಾದ ಘಟನೆ ಘಟನೆ ಮೂಲ್ಕಿಯಲ್ಲಿ ನಡೆದಿದೆ.

ಇದನ್ನೂ ಓದಿ: 🟣ಉಜಿರೆ: ಅನುಗ್ರಹ ಶಾಲಾ ಪಾಲಕ ಪೋಷಕರ ಸಭೆ ಹಾಗೂ ಪ್ರತಿಭಾ ಪುರಸ್ಕಾರ

ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪ ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ರೈನ್‌ಕೋಟ್ ಧರಿಸುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಲ್ಕಿಯ ಪಾವಂಜೆಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

ಬಂಗ್ರಕುಳೂರು ನಿವಾಸಿ ಶ್ರುತಿ ಆಚಾರ್ಯ (27) ಮೃತ ದುರ್ದೈವಿ. ಅವರ ಜೊತೆಗಿದ್ದ ತಂದೆ ಗೋಪಾಲ್ ಆಚಾರ್ಯ (53) ಮತ್ತು ಅಲ್ಲೇ ಪಕ್ಕದಲ್ಲಿದ್ದ ಕೈರುನ್ನಿಸಾ (52) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾರೀ ಮಳೆಗೆ ಶ್ರುತಿ ಮತ್ತು ಆಕೆಯ ತಂದೆ ರೈನ್ ಕೋಟ್ ಧರಿಸಲು ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದಾಗ ಉಡುಪಿಯಿಂದ ಮಂಗಳೂರು ಕಡೆಗೆ ವೇಗವಾಗಿ ಬರುತ್ತಿದ್ದ ಕಾರು ಅವರ ಮೇಲೆ ಡಿಕ್ಕಿ ಹೊಡೆದಿದೆ.

ಸುಮಾರು 15 ದಿನಗಳ ಹಿಂದೆ ನಿಧನರಾದ ತನ್ನ ಸಹೋದರನ ಅಂತಿಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇತ್ತೀಚೆಗೆ ಮನೆಗೆ ಮರಳಿದ್ದರು. ಅಪಘಾತ ನಡೆದ ದಿನ, ಅವರು ಕಿನ್ನಿಗೋಳಿಯ ಬ್ಯಾಂಕ್‌ಗೆ ಭೇಟಿ ನೀಡಿ ತನ್ನ ತಂದೆಯೊಂದಿಗೆ ಹಿಂತಿರುಗುತ್ತಿದ್ದರು.

Leave a Reply

Your email address will not be published. Required fields are marked *