Thu. Jul 3rd, 2025

Kadaba: ಕಡಬ ಬಸ್ ನಿಲ್ದಾಣ ಸಮಸ್ಯೆ – ಭೂ ಒತ್ತುವರಿ ಮಾಡಿ ತಕ್ಷಣ ಹೊಸ ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭಿಸಬೇಕು, ತಕ್ಷಣ ಕ್ರಮಕ್ಕೆ ಸೂಚನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ

ಕಡಬ:(ಜು.3) ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಕಡಬದಲ್ಲಿನ ಬಸ್ ನಿಲ್ದಾಣದ ಸಮಸ್ಯೆಯ ಬಗ್ಗೆ ಗಂಭೀರವಾಗಿ ಗಮನಹರಿಸಿ, ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸೂಚನೆ ನೀಡಿದರು.

ಇದನ್ನೂ ಓದಿ: ⭕ಮರಕ್ಕೆ ಕಾರು ಡಿಕ್ಕಿಯಾಗಿ ಗರ್ಭಿಣಿ ಸ್ಥಳದಲ್ಲೇ ಸಾವು.!

ಕಡಬ ತಾಲೂಕು ಬಸ್ ನಿಲ್ದಾಣವು ಸುಬ್ರಹ್ಮಣ್ಯ – ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಮದ್ಯದಲ್ಲಿರುವ ಪಂಜ ಸುಳ್ಯ ರಸ್ತೆ ತಿರುವಿನಲ್ಲಿ ನೆಲೆಗೊಂಡಿದೆ. ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅಪಾರ ತೊಂದರೆ ಉಂಟಾಗುತ್ತಿದ್ದು, ಬಹಳ ಅಪಾಯದ ಪರಿಸ್ಥಿತಿಗೂ ಕಾರಣವಾಗುತ್ತಿದೆ. ಈ ಸ್ಥಳವು ಪಂಜ,ಸುಳ್ಯ, ಮಡಿಕೇರಿ ಕಡೆಗೆ ಹೋಗುವ ರಸ್ತೆಯೂ ತಾಗಿಕೊಂಡಿರುವುದರಿಂದ ಮೂರು ಪ್ರಮುಖ ದಿಕ್ಕುಗಳಿಂದ ವಾಹನಗಳು ಸೇರಿದ ಹೆದ್ದಾರಿ ಸಂಪರ್ಕದ ಮಧ್ಯದಲ್ಲಿ ಬಸ್ ನಿಲ್ದಾಣ ಇರುವುದೇ ಪ್ರಮುಖ ಸಮಸ್ಯೆ ಎಂದು ಮಾಧ್ಯಮ ಪ್ರತಿನಿಧಿಗಳು ವಿವರಿಸಿದರು.


ಈ ವಿಷಯವನ್ನು ಮಾಧ್ಯಮದವರು ಪ್ರಸ್ತಾಪಿಸಿದಾಗ, ಸಚಿವರು ತಕ್ಷಣವೇ ಈ ಬಗ್ಗೆ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ರವರು ಸಚಿವರೊಂದಿಗೆ ಮಾತನಾಡಿ, ಹೊಸ ಬಸ್ ನಿಲ್ದಾಣಕ್ಕೆ ಭೂಮಿ ಈಗಾಗಲೇ ನಿಗದಿಯಾಗಿದ್ದು, ಆದರೆ ಅದಕ್ಕೆ ಸಂಪರ್ಕ ಹೊಂದುವ ರಸ್ತೆಯಲ್ಲಿ ಖಾಸಗಿ ಕಟ್ಟಡವೊಂದು ಅಡ್ಡಿಯಾಗಿದ್ದು, ಯೋಜನೆ ಮುಂದುವರಿಯಲು ವಿಳಂಬವಾಗಿದೆ, ಎಂದು ಹೇಳಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾ ರೆಡ್ಡಿಯವರು,ಕೂಡಲೇ ಅಂತವರ ಭೂ ಒತ್ತುವರಿ ಮಾಡಿ ತಕ್ಷಣ ಹೊಸ ಬಸ್ ನಿಲ್ದಾಣದ ಕಾಮಗಾರಿ ಪ್ರಾರಂಭಿಸಬೇಕು.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ನೇರ ಸೂಚನೆ ನೀಡಿದರು. ಕಡಬ ಪೇಟೆಯ ಹೃದಯಭಾಗದಲ್ಲಿರುವ ಈ ಬಸ್ ನಿಲ್ದಾಣದ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಸಾರ್ವಜನಿಕರ ಹಿತದೃಷ್ಟಿಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕಾರ್ಯೋನ್ಮುಖವಾಗಿದೆ ಎಂಬ ಸ್ಪಷ್ಟ ಸೂಚನೆ ಸಚಿವರ ಈ ಮಾತುಗಳಿಂದ ವ್ಯಕ್ತವಾಯಿತು.

Leave a Reply

Your email address will not be published. Required fields are marked *