ಕೋಲಾರ :(ಜು.3) ಮರಕ್ಕೆ ಕಾರು ಡಿಕ್ಕಿಯಾಗಿ ಗರ್ಭಿಣಿ ರುಂಡ ಕಟ್ ಆಗಿ ಬಿದ್ದ ಘಟನೆ ಕೋಲಾರದ ಮಾಲೂರಿನ ಬಾವನಹಳ್ಳಿ ರಸ್ತೆಯ ಪುರ ಗೇಟ್ ಬಳಿ ನಡೆದಿದೆ.

ಇದನ್ನೂ ಓದಿ: ⭕ಮದುವೆಯಾಗಿ 45 ದಿನಕ್ಕೆ ಗಂಡನ ಕೊಂದು, ಮಾವನ ಜತೆ ಓಡಿ ಹೋದ ಮಹಿಳೆ
ಗರ್ಭಿಣಿ ಅರ್ಚನಾ ಅವರನ್ನು ಅವರ ಮಾವ ನಾರಾಯಣಸ್ವಾಮಿ ಅವರ ಗ್ರಾಮ ಕೊರಚನೂರಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎದುರಿಗೆ ಲಾರಿಯೊಂದು ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಅರ್ಚನಾ ದೇಹದಿಂದ ರುಂಡ ಹಾಗೂ ಎಡಗೈ ಭಾಗ ಪ್ರತ್ಯೇಕವಾಗಿದೆ.

ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


