ಧರ್ಮಸ್ಥಳ:(ಜು.7) ಧರ್ಮಸ್ಥಳದಲ್ಲಿ ಸೆ.14ರಿಂದ 21ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಶ್ರಯದಲ್ಲಿ 27ನೇ ವರ್ಷದ ಭಜನಾ ಕಮ್ಮಟ ಆಯೋಜಿಸಲಾಗಿದೆ.

ಇದನ್ನೂ ಓದಿ: 🔴ಗೇರುಕಟ್ಟೆ: ಮನ್ ಶರ್ ವಿದ್ಯಾರ್ಥಿ ಸಭಾ ಚುನಾವಣೆಗೆ ಬೆಳ್ತಂಗಡಿ ತಹಶೀಲ್ದಾರ್ ಭೇಟಿ
14ರಂದು ಆರಂಭಗೊಂಡು 21ರಂದು ಭಜನೋತ್ಸವದೊಂದಿಗೆ ಸಮಾಪನಗೊಳ್ಳಲಿದೆ. ಭಜನೆಯಲ್ಲಿ ರಾಗ, ತಾಳ, ಲಯದ ಜ್ಞಾನವಿದ್ದು, 18 ವರ್ಷದಿಂದ 45 ವರ್ಷ ಪ್ರಾಯದ ಒಳಗಿನವರಿಗೆ ಕಮ್ಮಟದಲ್ಲಿ ಭಾಗವಹಿಸಲು ಅವಕಾಶವಿದೆ.

ಇದುವರೆಗೆ ಇಲ್ಲಿನ ಭಜನಾ ಕಮ್ಮಟದಲ್ಲಿ ಭಾಗವಹಿಸದೆ ಇರುವವರಾಗಿರಬೇಕು. ಒಂದು ಭಜನಾ ಮಂಡಳಿಯಿಂದ ಇಬ್ಬರಿಗೆ ಮಾತ್ರ ಅವಕಾಶವಿದ್ದು, ತಾವು ಕಲಿತು ಕಲಿಸಿಕೊಡುವವರಾಗಿರಬೇಕು. ಆಸಕ್ತರು ಆಗಸ್ಟ್ 31ರ ಒಳಗೆ ಹೆಸರು ನೋಂದಾಯಿಸಬಹುದು ಎಂದು ಭಜನಾ ಕಮ್ಮಟ ಸಂಚಾಲಕ ಟಿ.ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


