ಮಂಗಳೂರು( ಜು.26): ರಿಲಿಂಟೆಕ್ಸ್ ಎಲ್‌ಎಲ್‌ಪಿ ಸಂಸ್ಥೆಯ ಸ್ಥಾಪಕ ಶ್ರೀ ದಿವಯಂತ್ ನಾಯಕ್ ಅವರ ನೇತೃತ್ವದಲ್ಲಿ, ಮಂಗಳೂರು ಕಚೇರಿಯಲ್ಲಿ ಭಾರತೀಯ ಸೈನ್ಯದ ಧೈರ್ಯ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸಲು ಕಾರ್ಗಿಲ್ ವಿಜಯ್ ದಿವಸ್ ಅನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


ಇದನ್ನೂ ಓದಿ: ⭕ಉಡುಪಿ: ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ
ಸಂಜೆ 5:30 ಗಂಟೆಗೆ ಸ್ವಾಗತ ಭಾಷಣದಿಂದ ಕಾರ್ಯಕ್ರಮ ಆರಂಭವಾಯಿತು. ನಂತರ ಮಿಸ್. ಗೀತಾ ಅವರು ಅತಿಥಿಗಳನ್ನು ಪರಿಚಯಿಸಿದರು. ಭಾರತ ಮಾತೆಗೆ ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಹಾಜರಾಗಿದ್ದ ನಿವೃತ್ತ ಸುಬೇದಾರ್ ಶ್ರೀ ವಿಠ್ಠಲ್ ರಾವ್ ಎಂ.ಎಲ್. ಅವರನ್ನು ಕಾರ್ತಿಕ್, ರಾಹುಲ್ ಮತ್ತು ಗೌತಮ್ ಅವರ ಮೂಲಕ ಗೌರವಿಸಲಾಯಿತು.


ಶ್ರೀ ರಾವ್ ಅವರು ತಮ್ಮ ಸೈನಿಕ ಜೀವನದ ಪ್ರೇರಣಾದಾಯಕ ಅನುಭವಗಳನ್ನು ಹಂಚಿಕೊಂಡರು ಮತ್ತು ದೇಶಪ್ರೇಮಭಾವನೆಗಳನ್ನು ಪ್ರೇರೇಪಿಸಿದರು. ನಂತರ ಸಾಂದರ್ಭಿಕವಾಗಿ ಶ್ರಿಮತಿ ಸಮಕೀಷಾ ಅವರಿಂದ ಇಂಪಾದ ಹಾಡು ಪಡುವ ಮೂಲಕ ಕಾರ್ಯಕ್ರಮದಲ್ಲಿ ಭಾವನಾತ್ಮಕತೆ ಹೆಚ್ಚಿತು.
ಈ ಬಳಿಕ ಭಾರತೀಯ ಸೇನೆಗೆ ಶ್ರದ್ಧಾಂಜಲಿಯಾಗಿ ಸಣ್ಣ ವಿಡಿಯೋ ಪ್ರದರ್ಶಿಸಲಾಯಿತು. ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಸಮಾರೋಪ ಭಾಷಣವನ್ನು ಶ್ರೀ ಪ್ರಜ್ವಲ್ ಪಿ.ಜೆ. ಅವರು ನೀಡಿದರು.


ಸಂಸ್ಥೆಯ ಸದಸ್ಯರು ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು ಮತ್ತು ಕಾರ್ಗಿಲ್ ವಿಜಯ್ ದಿನದ ಮಹತ್ವವನ್ನು ಅರಿಯುವಂತೆ ಪ್ರೇರಣೆಯಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ತಂಡದ ಸಮೂಹ ಚಿತ್ರವೊಂದನ್ನು ತೆಗೆದು, ದೇಶಭಕ್ತಿಯ ಭಾವನೆ, ಏಕತೆ ಮತ್ತು ಗೌರವವನ್ನು ಸ್ಮರಣೀಯವಾಗಿ ದಾಖಲಿಸಲಾಯಿತು.
