ಸುಳ್ಯ, (ಜು.28) : ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಕಲ್ಲಗುಂಡಿ ಅಂಚೆ ಕಚೇರಿ ಬಳಿ ನಡೆದಿದೆ.

ಇದನ್ನೂ ಓದಿ: 👏🏻Remona Pereira : ನಿರಂತರ 170 ಗಂಟೆ ಭರತನಾಟ್ಯ
ಮೃತರನ್ನು ಕಮಲಾ (67) ಎಂದು ಗುರುತಿಸಲಾಗಿದೆ.
ಕಮಲಾ ಅವರು ಸಂಪಾಜೆಗೆ ಹೋಗುವ ಬಸ್ ಹತ್ತುವುದಕ್ಕಾಗಿ ಕಲ್ಲಗುಂಡಿ ಅಂಚೆ ಕಚೇರಿ ಬಳಿ ರಸ್ತೆ ದಾಟುತ್ತಿದ್ದಾಗ, ಸುಳ್ಯದ ಕಡೆಗೆ ಬರುತ್ತಿದ್ದ ಕೇರಳ ನೋಂದಣಿಯ ಬೈಕ್ ನಿಯಂತ್ರಣ ಕಳೆದುಕೊಂಡು ಅವರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

