ತುಮಕೂರು :(ಜು.31) ಆತ ಓದು ಬರಹ ತಿಳಿಯದ ಮುಗ್ದ ಕೂಲಿ ಕಾರ್ಮಿಕ. ಆದರೂ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸಿದ್ದಾನೆ. ಮೈಸೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದ ಮಗಳ ಖರ್ಚಿಗೆ ಫೋನ್ ಪೇ ಮೂಲಕ ನೆರೆಹೊರೆಯವರ ಬಳಿ ಹೋಗಿ ಆಗಾಗ ಹಣ ಹಾಕಿಸುತ್ತಿದ್ದ. ಇದೇ ಆತನ ಮುದ್ದಿನ ಮಗಳ ಜೀವಕ್ಕೆ ಮುಳುವಾಗಿದೆ.

ಇದನ್ನೂ ಓದಿ: 🟠ಬೆಳ್ತಂಗಡಿ: ಬಾರ್ಯ ಕ್ಷೇತ್ರದಲ್ಲಿ ನಾಗರಪಂಚಮಿ
ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಂಬರ್ ದುರ್ಬಳಕೆ ಅನ್ನೋದು ಹೆಚ್ಚಾಗುತ್ತಿದೆ. ಯಾರೋ ಕೊಟ್ಟ ಮೊಬೈಲ್ ನಂಬರ್ ದುರಪಯೋಗ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೆಣ್ಣು ಮಕ್ಕಳ ನಂಬರ್ ಸಿಕ್ಕಿದ್ರೆ ಅಂದ ಚೆಂದ ವರ್ಣಿಸಿ ಪ್ರೀತಿಸುವಂತೆ ಸತಾಯಿಸುತ್ತಾರೆ. ಒಪ್ಪದಿದ್ದಾಗ ಕೊಲೆ ಮಾಡಿರುವ ಪ್ರಕರಣಗಳನ್ನು ನಾವು ಕೇಳಿದ್ದೇವೆ. ಅದೇ ರೀತಿ ಇಲ್ಲೊಬ್ಬ ತಂದೆ ಹಾಸ್ಟೆಲ್‌ನಲ್ಲಿದ್ದುಕೊಂಡು ನರ್ಸಿಂಗ್ ಓದುತ್ತಿದ್ದ ತನ್ನ ಮಗಳ ವಿದ್ಯಾಭ್ಯಾಸ ಇನ್ನಿತರೆ ಖರ್ಚಿಗೆ ಪೋನ್ ಪೇ ಮಾಡುವಂತೆ ತನ್ನ ಮಾಲೀಕನ ಮಗನಿಗೆ ಹಣ ಕೊಟ್ಟು ಮಗಳ ಮೊಬೈಲ್ ನಂಬರ್ ಕೊಟ್ಟಿದ್ದ. ಹಣ ಪೋನ್ ಪೇ ಮಾಡಿದ ಕೀಚಕ, ಆತನ ಮಗಳ ಮೊಬೈಲ್ ಗೆ ಕರೆ ಮಾಡಿ ಪ್ರೀತಿಸುವಂತೆ ಟಾರ್ಚರ್ ಕೊಟ್ಟಿದ್ದಾನೆ. ಅಲ್ಲದೆ ಆಕೆ ಫೋಟೊ ತೆಗೆದುಕೊಂಡು ಇನ್ನಿಲ್ಲದ ಕಿರುಕುಳ ಕೊಟ್ಟಿದ್ದಾನೆ.ಇವನ ಕಿರುಕುಳ ತಾಳಲಾಗದೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
22 ವರ್ಷದ ಭಾವನಾ ತಂದೆ ತಾಯಿಯ ಕನಸಿನಂತೆ ಓದಿ ವಿದ್ಯಾವಂತೆಯಾಗಿ, ಹೆತ್ತರವರನ್ನ ಸಾಕಬೇಕು ಅನ್ನೋ ಕನಸ್ಸು ಕಂಡಿದ್ದಳು. ನೂರಾರು ಆಸೆಗಳನ್ನು ಹೊತ್ತು ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಳು. ಇದೇ ಕಾರಣಕ್ಕೆ ಚೆನ್ನಾಗಿ ಓದುತ್ತಿದ್ದಳು. ಇತ್ತ ಮೈಸೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದಳು. ಬಾಳಿ ಬದುಕಬೇಕಾದ ಮುಗ್ದ ಯುವತಿಯ ಪಾಲಿಗೆ ಈ ಪೋನ್ ಪೇ, ಗೂಗಲೇ ಪೇ ಅನ್ನೋದು ಯಮರಾಯನಾಗಿ ಬಂದು, ಆಕೆಯ ಜೀವವನ್ನೆ ಕಿತ್ತುಕೊಂಡಿದೆ. ತಮಗೆ ಅರಿಯದೇ ಕೀಚಕನೊಬ್ಬನಿಗೆ ಮಗಳ ಪೋನ್ ನಂಬರ್ ಕೊಟ್ಟು ಹಣ ಹಾಕಿಸಿದ್ದೇ ಆಕೆಯ ಜೀವಕ್ಕೆ ಮುಳುವಾಗಿದೆ. ಭಾವನ ನಂಬರ್ ಪಡೆದು ಹಣ ಹಾಕಿದ ಪಾಪಿ ಆಕೆಗೆ ಪ್ರೀತಿಸುವಂತೆ ಕಿರುಕುಳ ನೀಡಿದ್ದಾನೆ.ಪ್ರೀತಿಸದೇ ಹೋದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದಾನೆ. ಕೀಚಕನ ಕಿರುಕುಳದಿಂದ ಬೇಸತ್ತ ಭಾವನ ನೆಲಮಂಗಲದಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಗಳಿಗೆ ಒಂದು ಸುಂದರ ಜೀವನವನ್ನು ಕಟ್ಟಿಕೊಡಬೇಕೆಂದು ಕನಸ್ಸು ಕಂಡಿದ್ದೆ. ಮೊದಲಿಗೆ ನವೀನ್ ಕೂಡಾ ನನ್ನ ಮಗಳನ್ನು ತಂಗಿ ತಂಗಿ ಎಂದು ಮಾತನಾಡಿಸುತ್ತಿದ್ದ. ಪ್ರತಿಬಾರಿಯೂ ಆತನ ಬಳಿ ಹಣ ಕೊಟ್ಟು ಮಗಳಿಗೆ ಹಾಕುವಂತೆ ಹೇಳುತ್ತಿದ್ದೆ. ಆದರೆ ಈ ರೀತಿಯಾಗಿ ದುರುಪಯೋಗ ಮಾಡಿಕೊಳ್ಳುತ್ತಾನೆ ಎಂದುಕೊಂಡಿರಲಿಲ್ಲ. ಕಷ್ಟಬಿದ್ದು ಸಾಕಿದ್ದ ಮಗಳನ್ನು ಇಂದು ನಾವು ಕಳೆದುಕೊಂಡಿದ್ದೇವೆ ಎಂದು ಗೋಳಿಟ್ಟಿದ್ದಾರೆ. ಈ ಹಿಂದೆ ನವೀನನ ಕಿರುಕುಳ ತಾಳಲಾರದೆ ಭಾವನ ಮಾತ್ರೆಗಳನ್ನ ನುಂಗಿ ಆತ್ಮಹತ್ಯೆ ಗೆ ಯತ್ನಿಸಿದ್ದಳು. ಈ ವೇಳೆ ತಾಯಿಯೊಂದಿಗೆ ನವೀನ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಳು. ಈ ಬಗ್ಗೆ ಗುಬ್ಬಿ ತಾಲೂಕಿನ ಚೇಳೂರು ಪೊಲೀಸ್ ಠಾಣೆಯಲ್ಲಿ ನವೀನನ ವಿರುದ್ದ ದೂರು ನೀಡಿದ್ದರು. ದೊಡ್ಡವರೆಲ್ಲಾ ಸೇರಿ ಹೆಣ್ಣು ಮಗಳ ಭವಿಷ್ಯ ಹಾಳಾಗುತ್ತದೆ ಎಂದು ರಾಜಿ ತೀರ್ಮಾನ ಮಾಡಿ ನವೀನನಿಗೆ ಬುದ್ದಿವಾದ ಹೇಳಿದ್ದಾರೆ. ಆದರೂ ಪಾಪಿ ನವೀನ ತನ್ನ ಚಾಳಿ ಬಿಡದೇ ಭಾವನಗೆ ಫೋನ್ ಮಾಡಿ ಟಾರ್ಚರ್ ಕೊಡುತ್ತಿದ್ದ ಇದರಿಂದ ಬೇಸತ್ತ ಭಾವನ ಚಿಕ್ಕಮ್ಮ ನೇತ್ರಾವತಿ ಮನೆ ಹೋಗಿದ್ದಳು. ಬಿಜಿಎಸ್ ಆಸ್ಪತ್ರೆಗೆ ಕೆಲಸಕ್ಕೆ ಸೇರಿ ಅಪ್ಪ ಅಮ್ಮನ ಕಷ್ಟಗಳನ್ನ ತೀರಿಸಬೇಕು ಅಂದುಕೊಂಡಿದ್ದಳು. ಆದರೆ ನವೀನನ ಕಾಟ ತಡೆಯಲಾಗದೇ ಚಿಕ್ಕಮ್ಮನ ಮನೆಯಲ್ಲೇ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


