ಮೊಗ್ರು :(ಆ. 3) ಮೊಗ್ರು ಗ್ರಾಮದ ಅಲೆಕ್ಕಿ ಶ್ರೀರಾಮ ಶಿಶುಮಂದಿರದಲ್ಲಿ ಆ.02ರಂದು ಶ್ರೀರಾಮ ಶಿಶು ಮಂದಿರದ ಮಾತೃ ಮಂಡಳಿಯ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಅಲೆಕ್ಕಿ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಅಧ್ಯಕ್ಷರಾದ ರಮೇಶ್ ಗೌಡ ನೆಕ್ಕರಾಜೆ, ಗೌರವಾಧ್ಯಕ್ಷರಾದ ಉದಯ ಭಟ್, ಅತಿಥಿಗಳಾಗಿ ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ ಮುಗೇರಡ್ಕ, ಮಾತೃ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ, ಕಾರ್ಯದರ್ಶಿಗಳಾದ ಶ್ರೀಮತಿ ಸ್ವಾತಿ ಮತ್ತು ಎಲ್ಲಾ ಮಾತೆಯರು ಹಾಗೂ ಮಾತಾಜಿಯವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಟಿದ ಕೂಟ ಕಾರ್ಯಕ್ರಮದಲ್ಲಿ ಮಾತೆಯರೆಲ್ಲ ಸೇರಿ ಸುಮಾರು 30 ಬಗೆಯ ವಿವಿಧ ತುಳುನಾಡ ವಿಶೇಷ ಖಾದ್ಯಗಳನ್ನು ತಯಾರಿಸಿ ತಂದು ಚಿಣ್ಣರು ಮತ್ತು ಆಗಮಿಸಿದ ಎಲ್ಲಾ ಅತಿಥಿಗಳಿಗೆ ಬಡಿಸಿದರು.

ತುಳುನಾಡ ವಿಶೇಷ ಆಟಗಳಾದ ಚೆನ್ನೆ ಮುಂತಾದ ಆಟಗಳನ್ನು ಮಾತೆಯರಿಂದ ಆಡಿಸಲಾಯಿತು.

