Thu. Oct 16th, 2025

Kasaragod: ನೇಣುಬಿಗಿದುಕೊಂಡು ಯುವತಿ ಆತ್ಮಹತ್ಯೆಗೆ ಯತ್ನ – ಆಸ್ಪತ್ರೆ ಸಾಗಿಸುವ ವೇಳೆ ಅಪಘಾತದಲ್ಲಿ ಯುವತಿ ಮೃತ್ಯು – ವಿಧಿಯಾಟ ಅಂದ್ರೆ ಇದೇ ಅಲ್ವಾ..?

ಕಾಸರಗೋಡು: ಬೇತೂರು ಪಾರ ಸಮೀಪ ನಡೆದ ಅಪಘಾತದಲ್ಲಿ ಖಾಸಗಿ ಆಸ್ಪತ್ರೆಯ ಅಂತಿಮ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ, ಬೇಡಡ್ಕ ಬೇತೂರುಪಾರ ತಚ್ಚಾರ್ ಕುಂಡುವಿನ ಮಹಿಮಾ (19) ಮೃತಪಟ್ಟಿದ್ದಾರೆ.

ಇದನ್ನೂ ಓದಿ: ⭕Bengaluru: ಇಂಜೆಕ್ಷನ್ ನೀಡಿ ವೈದ್ಯೆಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಳಿಗ್ಗೆ ಮನೆಯ ಕೋಣೆಯಲ್ಲಿ ಮಹಿಮಾ ನೇಣು ಬಿಗಿದ ಸ್ಥಿತಿಯಲ್ಲಿ ಗಮನಿಸಿದ ಸಹೋದರ ಮಹೇಶ್ ಕೂಡಲೇ ಕಾರಿನಲ್ಲಿ ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಅಪಘಾತ ನಡೆದಿದೆ.

ಮನೆಯಿಂದ ಒಂದು ಕಿ.ಮೀ ಅಂತರದಲ್ಲಿ ಅಪಘಾತ ನಡೆದಿದೆ.ಸ್ಥಳೀಯರು ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಆದರೆ ಮಹಿಮಾ ಆಗಲೇ ಮೃತಪಟ್ಟಿದ್ದರು. ಮಹೇಶ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ.ವಿದ್ಯಾರ್ಥಿನಿ ನೇಣು ಬಿಗಿದ ಹಾಗೂ ಅಪಘಾತದ ಬಗ್ಗೆ ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *