Sun. Oct 19th, 2025

Belthangady: ಅಕ್ರಮ ಕೋಳಿ ಅಂಕಕ್ಕೆ ಪೋಲಿಸ್‌ ದಾಳಿ – ಮೂವರ ಬಂಧನ

ಬೆಳ್ತಂಗಡಿ; ಮೇಲಂತಬೆಟ್ಟುವಿನಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿದ್ದು ಮೂವರನ್ನು ಬಂಧಿಸಿ ಕೋಳಿಗಳು ಹಾಗೂ ಹಣ ವಶಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ಉತ್ತರಪ್ರದೇಶದ ಬರೇಲಿಯಲ್ಲಿ ನಡೆಯುವ 70 ನೇ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಯಕ್ಷಿತಾ ಜೆ. ಆಯ್ಕೆ


ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಬರಮೇಲು ಎಂಬಲ್ಲಿ ಅಕ್ರಮ ಕೋಳಿ ಅಂಕ ಹಾಗೂ ಜುಗಾರಿ
ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ಬೆಳ್ತಂಗಡಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ತಿಲಕ್
ಹಾಗೂ ತಂಡ ಅ.17 ರಂದು ದಾಳಿ ನಡೆಸಿದ್ದು ಈ ವೇಳೆ ಅಲ್ಲಿದ್ದವರು ಓಡಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದರು.

ಆದರೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಶೇಖರ ಹೆಗ್ಡೆ, ಪುನೀತ್, ಜಗದೀಶ್
ಎಂಬವರಾಗಿದ್ದಾರೆ. ಓಡಿ ತಪ್ಪಿಸಿಕೊಂಡ ಆರೋಪಿಗಳಾದ ಉದಯ್, ಜನಾರ್ಧನ ಗೌಡ ಮಲ್ಲೊಟ್ಟು ಎಂಬವರಾಗಿದ್ದಾರೆ.


ಸ್ಥಳದಿಂದ ಐದು ಕೋಳಿಗಳನ್ನು ವಶಪಡಿಸಿಕೊಂಡಿದ್ದು 500ರೂ ನಗದನ್ನು ಹಾಗೂ ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಐದು ಜನ ಆರೋಪಿಗಳ ವಿರುದ್ಧ ಅ.17 ರಂದು ಕಲಂ 87 KP Act ಜೊತೆಗೆ ಕಲಂ 11(1)(a), 11(1)(n) PREVEBTION OF CRUELTY TO ANIMAL ACT 1960 ಯಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *