Fri. Oct 31st, 2025

Mangaluru: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.)ಮಂಗಳೂರು ಇವರ ಸಹಯೋಗದೊಂದಿಗೆ 2000ನೇ ಮದ್ಯವರ್ಜನಾ ಶಿಬಿರದ ಉದ್ಘಾಟನಾ ಸಮಾರಂಭ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಮಂಗಳೂರು ತಾಲೂಕು ಹಾಗೂ ಜಸ್ಟಿಸ್ ಕೆ ಎಸ್ ಹೆಗಡೆ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆ ದೇರಳಕಟ್ಟೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ)ಮಂಗಳೂರು ಇವರ ಸಹಯೋಗದೊಂದಿಗೆ 2000ನೇ ಮದ್ಯವರ್ಜನಾ ಶಿಬಿರದ ಉದ್ಘಾಟನಾ ಸಮಾರಂಭ ಜರುಗಿತು. ಪ್ರಥಮವಾಗಿ ಯಶಸ್ವಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಇದನ್ನೂ ಓದಿ: ⭕ಬೆಳ್ತಂಗಡಿ: ಲಾಯಿಲದಲ್ಲಿ ಕೆಟ್ಟು ನಿಂತ ಕೆ.ಎಸ್. ಆರ್.ಟಿಸಿ ಬಸ್‌

ಉದ್ಘಾಟನಾ ಕಾರ್ಯಕ್ರಮವನ್ನು ಡಾ. ಶ್ರೀನಿವಾಸ್ ಭಟ್ ಯು ಪ್ರೊಫೆಸರ್ ಇವರು ನೆರವೇರಿಸಿದರು. ಯಾವುದೇ ಸಮಸ್ಯೆಗಳು ಹುಟ್ಟಿನಿಂದ ಬಂದಿರುವುದಿಲ್ಲ. ನಮ್ಮ ಪರಿಸ್ಥಿತಿಗೆ ಅನುಗುಣವಾಗಿ ನಾವೇ ಅದನ್ನು ಸೃಷ್ಟಿಸಿಕೊಂಡಿರುತ್ತೇವೆ. ಇದರಿಂದ ಹೊರಬರಲು ನಮಗೆ ಒಳ್ಳೆಯ ಅವಕಾಶ ದೊರೆತಿದೆ ಎಂಬ ಮಾತುಗಳನ್ನು ಹೇಳಿದರು.

ದಿನೇಶ್ ಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕರು. ಮಾತನಾಡುತ್ತಾ ಒಂದು ಕುಟುಂಬ ದುಶ್ಚಟಕ್ಕೆ ಬಲಿಯಾಗಿ ನರಳುತ್ತಿರುವ ಸಂದರ್ಭ ಅವರ ಕುಟುಂಬವನ್ನು ಮೇಲೆತ್ತಲು ಯಾವುದೆಲ್ಲ ಕೆಲಸಗಳನ್ನು ಮಾಡಬೇಕು ಎಂಬ ಆಲೋಚನೆಯನ್ನು ಅನುಷ್ಠಾನಗೊಳಿಸಿದ ಪೂಜ್ಯರಿಗೆ ನಾವೆಲ್ಲರೂ ಕೃತಜ್ಞತರಾಗಿರಬೇಕು ಎಂದು ಹೇಳಿದರು.

ರವೀಂದ್ರ ರೈ ನಿವೃತ್ತ ಮುಖ್ಯೋಪಾಧ್ಯಾಯರು ರಾಮಕೃಷ್ಣ ಶಾಲೆ ಹರೆಕಳ ಮಾತನಾಡುತ್ತಾ, ನಮ್ಮ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಬೇಕಾದರೆ ನಾವು ಮೊದಲು ಸುಸಂಸ್ಕೃತರಾಗಿರಬೇಕು ಎಂದು ಹೇಳಿದರು.

ಶ್ರೀಮತಿ ದಿವ್ಯ ಸತೀಶ್ ಶೆಟ್ಟಿ ಅಧ್ಯಕ್ಷರು ಕೋಟೆಕಾರ್ ಪಟ್ಟಣ ಪಂಚಾಯತ್, ಮಹಮ್ಮದ್ ಇಸ್ಮಾಯಿಲ್ ಮಾಜಿ ಜಿಲ್ಲಾಧ್ಯಕ್ಷರು ಜನಜಾಗೃತಿ ವೇದಿಕೆ ದಕ್ಷಿಣ ಕನ್ನಡ, ಶ್ರೀ ಮಹಾಬಲ ಚೌಟ ಮಾಜಿ ಅಧ್ಯಕ್ಷರು ತಾಲೂಕು ಜನಜಾಗೃತಿ ವೇದಿಕೆ ಮಂಗಳೂರು, ಶ್ರೀಮತಿ ಗೀತಾ ಪ್ರವೀಣ್ ಅಧ್ಯಕ್ಷರು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು ಕೇಂದ್ರ ಒಕ್ಕೂಟ ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಗೋಪಾಲಕೃಷ್ಣ ಅರಿಬೈಲು ನಿಕಟ ಪೂರ್ವ ಜನ ಜಾಗೃತಿ ವೇದಿಕೆ ಅಧ್ಯಕ್ಷರು ಕಾಸರಗೋಡು ಜಿಲ್ಲೆ, ಮಾತನಾಡುತ್ತಾ ಶಿಬಿರಕ್ಕೆ ಸೇರುವುದು ದೊಡ್ಡ ವಿಷಯವಲ್ಲ ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳುವುದು ತುಂಬಾ ಮುಖ್ಯ ಆದ್ದರಿಂದ ನಮ್ಮ ಜೀವನವನ್ನೇ ಪರಿವರ್ತನೆ ಮಾಡಿಕೊಳ್ಳಬಹುದು ಎಂಬ ಸಂದೇಶವನ್ನು ನೀಡಿದರು.
ಉಮೇಶ್ ಗಟ್ಟಿ ಅಧ್ಯಕ್ಷರು ಭಜನಾ ಪರಿಷತ್ ಮಂಗಳೂರು ತಾಲೂಕು, ಡಾ. ಸತೀಶ್ ರಾವ್, ಪ್ರೊಫೆಸರ್ ಮನೋರೋಗ ಚಿಕಿತ್ಸಾ ವಿಭಾಗ, ಡಾ.ಶಶಿಕುಮಾರ್ ಶಿಬಿರದ ವೈದ್ಯಾಧಿಕಾರಿಗಳು ಕೆ ಎಸ್ ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ ಶ್ರೀಮತಿ ವಿಜಯ ಮಾಜಿ ಗ್ರಾಮ್ ಪಂಚಾಯತ್ ಅಧ್ಯಕ್ಷರು ಬೆಲ್ಮ ತಾಲೂಕಿನ ಯೋಜನಾಧಿಕಾರಿಗಳು ಸುರೇಂದ್ರ ಸರ್, ಶುಭ ಹಾರೈಸಿದರು
.

ದೇರಳಕಟ್ಟೆ ವಲಯ ಮೇಲ್ವಿಚಾರಕರು ಅಶೋಕ್, ವಲಯದ ಎಲ್ಲ ಸೇವಾ ಪ್ರತಿನಿಧಿಗಳು ಹಾಗೂ ಶಿಬಿರಾರ್ಥಿಗಳು 54 ಜನ, ಭಾಗವಹಿಸಿದ್ದರು. ಹಾಗೂ ಆಸ್ಪತ್ರೆ ಎಲ್ಲಾ ಸಿಬ್ಬಂದಿ ವರ್ಗದವರು ಸಹಕಾರ ನೀಡಿದರು. ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಆಶಾ ಚಂದ್ರ ನಿರೂಪಿಸಿ, ಸ್ವಾಗತಿಸಿದರು. ಕೋಣಾಜೆ ವಲಯ ಮೇಲ್ವಿಚಾರಕರು ಗಿರೀಶ್ ವಂದಿಸಿದರು.

Leave a Reply

Your email address will not be published. Required fields are marked *