ಉಡುಪಿ: ವೇಷ ಕಳಚುವ ಮುನ್ನವೇ ಮಹಿಷಾಸುರ ಪಾತ್ರಧಾರಿ ಚೌಕಿಯಲ್ಲಿಯೇ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಇದನ್ನೂ ಓದಿ: ⭕ಯಕ್ಷಗಾನ ಕಲಾವಿದರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಬಿಳಿಮಲೆ
ಮಂದಾರ್ತಿ ಮೇಳದ ಯಕ್ಷಗಾನ ಕಲಾವಿದ ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿ ಈಶ್ವರ ಗೌಡ ಮೃತರು. ಮಂದಾರ್ತಿ ಎರಡನೇ ಮೇಳದಲ್ಲಿ ಮಹಿಷಾಸುರ ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಬದುಕಿಗೆ ಅಂತಿಮ ತೆರೆ ಎಳೆದಿದ್ದಾರೆ. ಅದೇ ಮೇಳದಲ್ಲಿ ಅವರ ತಂದೆ ಕೂಡ ವೇಷಧಾರಿಯಾಗಿದ್ದರು. ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ಈಶ್ವರಗೌಡ ಪಾತ್ರ ನಿರ್ವಹಿಸಿದ್ದರು.





