ಕಡಬ: ಕುಟ್ರುಪ್ಪಾಡಿ ನಿವಾಸಿ ಸೊಲೊಮೊನ್ (54) ಅವರು ನೀಡಿದ ದೂರಿನ ಮೇರೆಗೆ, ಅವರ ಪುತ್ರ ರಾಕೇಶ್ (36) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: 🔵ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಎಲ್. ಐ.ಸಿ ಯಿಂದ ಕೊಡುಗೆ ಹಸ್ತಾಂತರ
ರಾಕೇಶ್ ಅವರು ಕಡಬದ ಕಳಾರದಲ್ಲಿ ದ್ವಿಚಕ್ರ ವಾಹನ ಗ್ಯಾರೇಜ್ ನಡೆಸುತ್ತಿದ್ದು, ತನ್ನ ಪತ್ನಿ ಹಾಗೂ ಸ್ನೇಹಿತನ ನಡುವೆ ಮೊಬೈಲ್ ಸಂಪರ್ಕವಿರುವ ವಿಚಾರ ತಿಳಿದ ಹಿನ್ನೆಲೆ ತೀವ್ರ ಮನಸ್ಥಿತಿಯಲ್ಲಿದ್ದು, ದಿನಾಂಕ 19-11-2025 ರಂದು ಸಂಜೆ ಕಡಬ ಬಜಾಜ್ ಶೋರೂಮ್ ಹಿಂಭಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಸೊಲೊಮೊನ್ ಅವರ ಇನ್ನೊಬ್ಬ ಪುತ್ರ ರಾಜೇಶ್ ಅವರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 26-11-2025 ರಂದು ರಾಕೇಶ್ ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.



ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: 35/2025 ಕಲಂ: 194 (3)(iv) BNSS–2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


