Mon. Dec 8th, 2025

Vitla: ಅಳಿಕೆ ಎರುಂಬು ವಿಷ್ಣುಮಂಗಲ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕಿನ ಅಳಿಕೆ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಳಿಕೆ ವಲಯ, ಸಾಮೂಹಿಕ ಶ್ರೀ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಅಳಿಕೆ ವಲಯ, ಶ್ರೀ ವಿಷ್ಣುಮೂರ್ತಿ( ವಿಷ್ಣುಮಂಗಲ) ದೇವಸ್ಥಾನ ಎರುಂಬು, ಜನಜಾಗೃತಿ ವೇದಿಕೆ ಅಳಿಕೆ ವಲಯ, ಇದರ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಪದ್ಮವಿಭೂಷಣ ರಾಜ ಶ್ರೀ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಅಳಿಕೆ ಎರುಂಬು ವಿಷ್ಣುಮಂಗಲ ದೇವಸ್ಥಾನದಲ್ಲಿ ಬಾಲಕೃಷ್ಣ ಕಾರಂತರ ನೇತೃತ್ವದಲ್ಲಿ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ ಉಪಸ್ಥಿತಿಯಲ್ಲಿ ನಡೆಯಿತು.

ಇದನ್ನೂ ಓದಿ: 🟣ಕುಪ್ಪೆಟ್ಟಿ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇವರಿಂದ ಕುಪ್ಪೆಟ್ಟಿ ಶ್ರೀ ಗಣೇಶ ಭಜನಾಮಂದಿರದ ನೂತನ ರಾಜಗೋಪುರದ ಲೋಕಾರ್ಪಣೆ

ಧಾರ್ಮಿಕ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಬಾಲಕೃಷ್ಣ ಕಾರಂತ ವಲಯಾಧ್ಯಕ್ಷರು ಜನ ಜಾಗೃತಿ ವೇದಿಕೆ ಅಳಿಕೆ ವಲಯ ಇವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಧಾರ್ಮಿಕ ಉಪನ್ಯಾಸಕಿ ದಕ್ಷಿಣ ಕನ್ನಡ ಆಮಂತ್ರಣ ಸಾಂಸ್ಕೃತಿ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀಮತಿ ವಿಂದ್ಯಾ. ಎಸ್. ರೈರವರು ಧರ್ಮ ಜಾಗೃತಿ ಹಾಗೂ ನಮ್ಮಲ್ಲಿ ಸಂಸ್ಕಾರ ಬೆಳೆಸುವ ಬಗ್ಗೆ ತಿಳಿಸಿದರು. ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪದ್ಮನಾಭ ಪೂಜಾರಿ ಸಣ್ಣ ಗುತ್ತು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ 2 ಜಿಲ್ಲಾ ನಿರ್ದೇಶಕರಾದ ಶ್ರೀ ಬಾಬು ನಾಯ್ಕ ರವರು ಕಾರ್ಯಕ್ರಮದ ಬಗ್ಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಶ್ರೀ ನವೀನ್ ಚಂದ್ರ ಕಣಂತೂರು ಕೇಂದ್ರ ಒಕ್ಕೂಟ ಅಧ್ಯಕ್ಷರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ವಿಟ್ಲ ತಾಲೂಕು, ಶ್ರೀ ರಾಜೇಂದ್ರ ರೈ ವಲಯಧ್ಯಾಕ್ಷರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಳಿಕೆ ವಲಯ, ಅಳಿಕೆ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘದ ಒಕ್ಕೂಟಗಳ ಪದಾಧಿಕಾರಿಗಳಾದ ಶ್ರೀ ಶಿವಪ್ಪ ಮೂಲ್ಯ ,ಶ್ರೀ ರವೀಶ ಅಳಿಕೆ, ಶ್ರೀ ಉದಯ ನಾಯ್ಕ ಮುಳಿಯ, ಸುರೇಶ ಅಜ್ಜಿ ನಡ್ಕ ,ಬಾಲಕೃಷ್ಣ ಶೆಟ್ಟಿ ಮುಳಿಯ, ಶ್ರೀಮತಿ ಕುಸುಮ ಭೀಮಾವರ, ಚನಿಯಪ್ಪ ನಾಯ್ಕ ತೋರಣ ಕಟ್ಟೆ ,ಜನಾರ್ದನ ಪಟಿಕಲ್ಲು, ಚಂದ್ರಶೇಖರ ಕನ್ಯಾನ, ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶ್ರೀ ಶಿವರಾಮ್ ರಾವ್ ಭೈರಿಕಟ್ಟೆ, ಶ್ರೀ ಅನಿತಾ ಡಿಸೋಜಾ, ಶ್ರೀ ಸಚ್ಚಿದಾನಂದ ಪ್ರಭು ಆಜೇರು, ಇವರನ್ನು ಗೌರವಿಸಲಾಯಿತು. ಮುಳಿಯ ಒಕ್ಕೂಟದ ಸದಸ್ಯರಾದ ಶ್ರೀಮತಿ ಗಾಯತ್ರಿ ರವರು ಪ್ರಾರ್ಥಿಸಿ, ಶ್ರೀಮತಿ ಮಮತಾ ಉದಯ ನಾಯ್ಕ್ ರವರು ಸ್ವಾಗತಿಸಿ, ಸೇವಾ ಪ್ರತಿನಿಧಿ ಶ್ರೀಮತಿ ವಿನಯ ರೈ ವಂದಿಸಿದರು.

ಶ್ರೀ ಪ್ರವೀಣ್ ಪೂಜಾರಿ ಸಣ್ಣಗುತ್ತು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಳಿಕೆ ವಲಯದ ಎಲ್ಲಾ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಾಧಿಕಾರಿಗಳು,ಸದಸ್ಯರು, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಪದಾಧಿಕಾರಿಗಳು, ಜನಜಾಗೃತಿ ಸಮಿತಿಯವರು, ಸಾಮೂಹಿಕ ಸತ್ಯನಾರಾಯಣ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *