Thu. Dec 11th, 2025

Mysuru Palace: ಮೈಸೂರು ಅರಮನೆಯ ಮುಖ್ಯದ್ವಾರದ ಮೇಲಿನ ಛಾವಣಿ ಕುಸಿತ

ಮೈಸೂರು : ಮೈಸೂರಿನ ಅಂಬಾವಿಲಾಸ ಅರಮನೆಯ ಮುಖ್ಯದ್ವಾರದ ಮೇಲಿನ ಭಾಗ ಕುಸಿತಕಂಡಿದ್ದು, ಭಾರಿ ಅನಾಹುತ ತಪ್ಪಿದೆ. ಮೈಸೂರು ಅರಮನೆಯ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತವಾಗಿದ್ದು,ಅರಮನೆಯ ವರಾಹ ಗೇಟ್ ನ ಮುಖ್ಯದ್ವಾರದ ಮೇಲ್ಚಾವಣಿ ಕುಸಿದು ಆತಂಕಕ್ಕೆ ಕಾರಣವಾಗಿದೆ.ಸ್ವಲ್ಪ ಪ್ರಮಾಣದಲ್ಲಿ ಮೇಲ್ಚಾವಣಿ ಕುಸಿತವಾಗಿದೆ.

ಇದನ್ನೂ ಓದಿ: 🔴ಉಜಿರೆ: “ದೀಪ ಸಮನ್ವಯ” ಮತ್ತು “ದೀಪ ದೃಶ್ಯ” ಸಂಚಿಕೆಗಳ ಬಿಡುಗಡೆ

ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ.ಸಾರ್ವಜನಿಕರು ಆಗಮಿಸುವ ಗೇಟ್ ಬಳಿಯೇ ಕುಸಿತವಾಗಿದೆ.ಮೇಲ್ಚಾವಣಿ ಕೆಳಗೆ ಸಿಬ್ಬಂದಿ ನಿಲ್ಲಿಸಿದ್ದ ಬೈಕ್ ಮೇಲೆಯೇ ಅವಶೇಷಗಳು ಬಿದ್ದಿದೆ.

ಘಟನೆ ಬಳಿಕ ಗೇಟ್ ಬಳಿ ಬ್ಯಾರೀಕೇಟ್ ಗಳನ್ನು ಅಳವಡಿಕೆ ಮಾಡಲಾಗಿದೆ. ಸ್ವಚ್ಛತಾ ಸಿಬ್ಬಂದಿಯಿಂದ ಬಿದ್ದಿದ್ದ ಮೇಲ್ಚಾವಣಿಯ ಅವಶೇಷಗಳ ತೆರವು ಮಾಡಲಾಗಿದೆ.ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅನೇಕ ಗೋಡೆಗಳ ಮೇಲೆಯೂ ಬಿರುಕು ಮೂಡಿದ್ದು, ನಿರ್ವಹಣೆ ಕೊರತೆಯಿಂದ ಘಟನೆ ಸಂಭವಿಸಿದ್ಯಾ ಅನ್ನೋ ಅನುಮಾನ ಮೂಡಿದೆ. ಘಟನೆ ನಡೆದ ತಕ್ಷಣ ಎಚ್ಚೆತ್ತುಕೊಂಡ ಅರಮನೆಯ ಸಿಬ್ಬಂದಿ, ಸುರಕ್ಷತೆಯ ದೃಷ್ಟಿಯಿಂದ ಗೇಟ್ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಆ ಮೂಲಕ ಸಾರ್ವಜನಿಕರು ಅಪಾಯದ ಸ್ಥಳಕ್ಕೆ ಹೋಗದಂತೆ ತಡೆಯಲಾಗಿದೆ.

Leave a Reply

Your email address will not be published. Required fields are marked *