ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮುಂದಿನ ಮೂರು ವರ್ಷಗಳ ಅವಧಿಯ ನೂತನ ಅಧ್ಯಕ್ಷರಾಗಿ ತುಕಾರಾಮ ಬಿ., ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮನೋಹರ ಬಳಂಜ,

ಕಾರ್ಯದರ್ಶಿ ಸ್ಥಾನಕ್ಕೆ ಅರವಿಂದ ಹೆಬ್ಬಾರ್, ಉಪಾಧ್ಯಕ್ಷ ಸ್ಥಾನಕ್ಕೆ ಶಿಬಿ ಧರ್ಮಸ್ಥಳ, ಕೋಶಾಧಿಕಾರಿ ಸ್ಥಾನಕ್ಕೆ ಗಣೇಶ್ ಬಿ. ಹಾಗೂ
ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಗಳಿಗೆ ಪ್ರಸಾದ್ ಶೆಟ್ಟಿ, ಬಿ.ಎಸ್. ಕುಲಾಲ್,

ಮಂಜುನಾಥ ರೈ ಎನ್., ಪುಷ್ಪರಾಜ ಶೆಟ್ಟಿ ಅವರುಗಳು ನಾಮಪತ್ರ ಸಲ್ಲಿಸಿದ್ದು, ಎಲ್ಲಾ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.




