ಬೆಳ್ತಂಗಡಿ: ದಿನಾಂಕ 27/12/25 ರಿಂದ 1/1/2026 ರವರೆಗೆ 7 ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ 29 ನೇ ಸ್ಕೌಟ್ಸ್ & ಗೈಡ್ಸ್ ಜಾಂಬೋರೇಟ್ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 25 ಕ್ವಿಂಟಾಲ್ ಅಕ್ಕಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಸಾದ ರೂಪದಲ್ಲಿ ನೀಡಿ ಜಾಂಬೋರೇಟ್ ಗೆ ಶುಭ ಹಾರೈಸಿದ್ದಾರೆ.


ಇದನ್ನೂ ಓದಿ: ಉಜಿರೆ: ವೈಕುಂಠ ಏಕಾದಶಿ ಸಂಭ್ರಮ – ಶ್ರೀ ಜನಾರ್ದನ ಸ್ವಾಮಿಗೆ ವಿಶೇಷ ಧನುರ್ಮಾಸ ಅಲಂಕಾರ ಪೂಜೆ
ಎಸ್.ಡಿ.ಎಮ್.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೆಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣ ಛತ್ರದಿಂದ ಕಳುಹಿಸಿಕೊಡಲಾಯಿತು.ಅಕ್ಕಿಯನ್ನು ಕಳುಹಿಸುವ ಸಂದರ್ಭದಲ್ಲಿ ಭಾರತ್ ಸ್ಸ್ಕೌಟ್ಸ್ & ಗೈಡ್ಸ್, ಬೆಳ್ತಂಗಡಿ ಸ್ಧಳೀಯ ಸಂಸ್ದೆ ಯ ಕಾರ್ಯದರ್ಶಿ ಪ್ರಮೀಳಾ ,
ಜಿಲ್ಲಾ ಸಹಾಯಕ ಆಯುಕ್ತರಾದ ಶ್ರೀ ಬಿ ಸೋಮಶೇಖರ ಶೆಟ್ಟಿ ಮತ್ತು ಅನ್ನಪೂರ್ಣ ಛತ್ರದ ನಿರ್ವಹಣಾಧಿಕಾರಿಯಾದ ಜಿ ಸುಬ್ರಮಣ್ಯ ಪ್ರಸಾದ್ ಹಸಿರು ನಿಶಾನೆ ತೋರಿಸಿ ಪ್ರಯಾಣಕ್ಕೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಅನ್ನಪೂರ್ಣ ಛತ್ರದ ಭರತ್ರಾಜ್ ಜೈನ್,ಎಸ್.ಡಿ.ಎಂ.ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ರಾಜೇಶ ಬಿ, ರೋವರ್ ಸ್ಕೌಟ್ ಲೀಡರ್ ಲಕ್ಷ್ಮೀಶ ಭಟ್ಟ,ರೋವರ್ ಸರ್ವೇಶ್ ಜೈನ್, ತೇಜಸ್ವಿ ಹೆಗಡೆ ಉಪಸ್ಥಿತರಿದ್ದು ಶುಭ ಹಾರೈಸಿದರು.




