Wed. Nov 20th, 2024

Break for love: ಸಾಕಿದ ನಾಯಿಗೋಸ್ಕರ 7 ವರ್ಷದ ಪ್ರೀತಿಗೆ ಬ್ರೇಕ್..!!! – ಅಷ್ಟಕ್ಕೂ ಆಗಿದ್ದೇನು?

Break for love: (ನ.20) ಈಗಿನ ಕಾಲದಲ್ಲಿ ಸಾಕು ನಾಯಿಯನ್ನು , ನಾಯಿ ಅಂದ್ರೆ ಸಾಕಿರೋರಿಗೆ ಕೋಪ ಬಂದು ಬಿಡುತ್ತೆ. ನಾಯಿ ಅಂತ ಕರೀಬೇಡಿ.. ಹೆಸರಿಂದ ಕರೀರಿ ಅಂತಾರೆ. ಯಾಕಂದ್ರೆ ಕುಟುಂಬದ ಸದಸ್ಯನಾಗಿ ಸಾಕು ನಾಯಿ ಒಬ್ಬನಾಗಿರುತ್ತಾನೆ. ಸ್ವಲ್ಪ ಮಕ್ಕಳಿಗಿಂತ ಹೆಚ್ಚು ಪ್ರೀತಿ ಆರೈಕೆಯಲ್ಲಿ ನಾಯಿಯನ್ನು ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ನಾಯಿ ಸಾಕೋದು, ಆರೈಕೆ ಮಾಡೋದು ಹೆಚ್ಚು. ಆದರೆ ಇದೇ ಸಾಕು ನಾಯಿ 7 ವರ್ಷದ ಲವರ್‌ಗಳ ಸಂಬಂಧ ಅಂತ್ಯ ಮಾಡಿದೆ. ಅಷ್ಟೂ ಮಾತ್ರ ಅಲ್ಲ.. ಮದುವೆಯನ್ನೇ ರದ್ದು ಮಾಡಿಸಿದ ಘಟನೆ ನಡೆದಿದೆ.

ಇದನ್ನೂ ಓದಿ: 🟣ಸಕಲೇಶಪುರ: ಶಿರಾಡಿ ಗಡಿ ಚೌಡೇಶ್ವರಿ ಬ್ರಹ್ಮಕಲಶಕ್ಕೆ ಶೀಘ್ರದಲ್ಲಿ ಚಾಲನೆ

ಪ್ರಿಯಾಂಕಾ ಅನ್ನೋ ಎಕ್ಸ್ ಯೂಸರ್ ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ. ನನ್ನ ಹಾಗೂ ಬಾಯ್‌ಫ್ರೆಂಡ್ ಜೊತೆಗಿನ 7 ವರ್ಷಗಳ ಸಂಬಂಧ ಮುರಿದು ಬಿದ್ದಿದೆ. ಇದಕ್ಕೆ ಕಾರಣ ಆ ಬಾಯ್‌ಫ್ರೆಂಡ್ ಅಲ್ಲ, ಆತನ ತಾಯಿ ಅಂತ ಹೇಳಿಕೊಂಡಿದ್ದಾರೆ.


ಪ್ರಿಯಾಂಕಾ ಹಾಗೂ ಆಕೆಯ ಬಾಯ್‌ ಫ್ರೆಂಡ್ ನಡುವೆ 7 ವರ್ಷಗಳ ಪ್ರೀತಿ ಚೆನ್ನಾಗಿಯೇ ಇತ್ತು. ಹಲವು ವರ್ಷಗಳ ಸಂಬಂಧಕ್ಕೆ ಮದುವೆಯ ಅರ್ಥ ಕೊಡೋಕೆ ಇಬ್ಬರು ಚರ್ಚೆ ಮಾಡಿಕೊಂಡಿದ್ದಾರೆ. ಆದರೆ ಇವರಿಬ್ಬರಿಗೂ ಸವಾಲು ದೊಡ್ಡದಾಗಿಯೇ ಇತ್ತು. ಹೀಗಾಗಿ, ಎರಡೂ ಮನೆಯವರನ್ನು ಒಪ್ಪಿಸಬೇಕಿತ್ತು. ಹುಡುಗಿಯ ಮನೆಯಲ್ಲಿ ಅಂತದ್ದೇನು ಸಮಸ್ಯೆ ಆಗಿಲ್ಲ. ಹುಡುಗಿಯ ನಿರ್ಧಾರವನ್ನು ಫ್ಯಾಮಿಲಿ ಒಪ್ಪಿಕೊಂಡಿದ್ದಾರೆ. ಹುಡುಗನ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಮಗಳನ್ನು ಚೆನ್ನಾಗಿ ನೋಡಿಕೊಂಡ್ರೆ ಸಾಕು ಅಂತಷ್ಟೇ ಹೇಳಿದ್ದಾರೆ.

ಆದರೆ ಹುಡುಗನ ಮನೆಯಲ್ಲಿ ನೂರೆಂಟು ಪ್ರಶ್ನೆಗಳನ್ನು ಕೇಳಿದ್ದರು. ನಿನಗೆ ಅವಳೇ ಬೇಕಾ? ಬೇರೆ ಹುಡುಗೀರು ಸಿಗುತ್ತಾರೆ. ಆಸ್ತಿ ಅಂತಸ್ತು ಇರೋ, ಯಾವುದೇ ಕೆಲಸ ಮಾಡದಿದ್ದರೂ ಕೂತುಕೊಂಡ್ರೆ ಹಣ ಎಣಿಸೋ ಕುಟುಂಬದಿಂದ ಪ್ರಪೋಸಲ್ ಬಂದಿದೆ ಅಂತೆಲ್ಲಾ ತಲೆ ಒಳಗೆ ತುಂಬಿಸೋಕೆ ಹುಡುಗನಿಗೆ ತಾಯಿ ತಲೆಗೆ ತುಂಬುಸೋಕೆ ಮುಂದಾಗಿದ್ದಾರೆ.

ಪ್ರಿಯಾಂಕ ಜೊತೆಗಿನ ಪ್ರೀತಿ ಬೆಟ್ಟದಿಷ್ಟಿತ್ತು. ಹೀಗಾಗಿ ಹುಡುಗ ಪೋಷಕರನ್ನು ಒಪ್ಪಿಸಿದ್ದ. ಎರಡೂ ಮನೆಯವರ ಗ್ರೀನ್ ಸಿಗ್ನಲ್ ಕೊಟ್ಟ ಮೇಲೆನೇ ಮದುವೆ ಚರ್ಚೆ ಶುರುವಾಗಿತ್ತು. ಮದುವೆ ದಿನಾಂಕ ಯಾವಾಗ? ಎಷ್ಟು ಜನರನ್ನ ಕರೀಬೇಕು, ಹೇಗೆ ಮದುವೆ, ಎಲ್ಲಿ ಸ್ಥಳ, ಮಂಟಪ ಸೇರಿದಂತೆ ಅಂತ ಚರ್ಚೆಗಳಾದ್ಮಲೆ ಡೇಟ್ ಫಿಕ್ಸ್ ಆಯಿತು. ಮದುವೆ ಮಂಟಪ ಬುಕ್ ಮಾಡಿದ್ರು. ಮದುವೆ ದಿನ ಹಾಗೂ ರಿಸೆಪೈನ್‌ಗೆ ಏನೇನೂ ಊಟಕ್ಕೆ ಮೆನು ಇರಬೇಕು ಅಂತ ಲಿಸ್ಟ್ ಕೂಡ ಮಾಡಿದ್ರು. ಇನ್ನೇನು ಮದುವೆಗೆ ದಿನಗಳು ಹತ್ತಿರವಾದಂತೆ ಹುಡುಗನ ಅಮ್ಮ ಎಲ್ಲವನ್ನು ಬುಡಮೇಲು ಮಾಡಿಬಿಟ್ಟರು.


ಹುಡುಗಿ ಹತ್ರ ಮುದ್ದಾದ ಸಾಕು ನಾಯಿ ಇದೆ. ಅತ್ಯಂತ ಪ್ರೀತಿಯಿಂದ ಸಾಕಿದ್ದಾಳೆ. ಇನ್ನು ಹುಡುಗಿ ತಾಯಿಯ ಆರೋಗ್ಯ ಸರಿಯಿಲ್ಲ. ಹೀಗಾಗಿ ಮದುವೆಯಾದ್ಮಲೆ ತಾಯಿಗೆ ನಾಯಿಯನ್ನು ನೋಡಿಕೊಳ್ಳೋದಕ್ಕೆ ಸಾಧ್ಯವಿಲ್ಲ. ತಾಯಿ ಆರೋಗ್ಯದ ಕಾರಣದಿಂದ ಮನೆಯ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳಬೇಕಿತ್ತು. ಹೀಗಾಗಿ ಮದುವೆಯಾದ್ಮಲೆ ತಾನು ಸಾಕಿದ್ದ ಸಾಕು ನಾಯಿಯನ್ನು ಕರೆದುಕೊಂಡು ಬರ್ತೀನಿ ಅಂತ ಅತ್ತೆಗೆ ಹೇಳಿದ್ದಾಳೆ. ಜೊತೆಗೆ ಮನೆಯಲ್ಲಿ ತಾಯಿ ಆರೋಗ್ಯದ ವಿಚಾರವನ್ನ ಮಾತನಾಡಿದ್ದಾಳೆ.

ಆಗ ಹುಡುಗನ ತಾಯಿ ನನ್ನ ಮಗ ಮದುವೆ ಆಗ್ತಿರೋದು ನಿನ್ನನ್ನು. ನಮ್ಮ ಮನೆಗೆ ನೀನು ಮಾತ್ರ ಬಂದರೆ ಸಾಕು, ನಿನ್ನ ಜೊತೆ ನಾಯಿ ತರಬಾರದು. ನಮ್ಮ ಮನೆಯಲ್ಲಿ ಒಂದು ನಾಯಿ ಇದೆ. ಇದರ ಜೊತೆಗೆ ಮತ್ತೊಂದು ನಾಯಿ ನಮಗೆ ಬೇಡ. ಎಲ್ಲಾ ನಾಯಿಗಳಿಗೆ ಆಶ್ರಯ ನೀಡಲು ನಮ್ಮ ಮನೆ ಛತ್ರ ಅಲ್ಲ ಅಂತ ಹೇಳಿದ್ದಾರೆ. ಎಲ್ಲಾ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ ವಧು, ಕೊನೆಯ ಮಾತಿಗೆ ಗರಂ ಆಗಿದ್ದಾಳೆ. ನಾಯಿಗಳಿಗೆ ನೀವು ಆಶ್ರಯ ನೀಡುವುದೇ ಬೇಡ, ಈ ಸಂಬಂಧ ಮುಂದುವರಿಯೋದು ಬೇಡ ಅಂತ ಖಡಕ್ ಆಗಿ ಹೇಳಿದ್ದಾಳೆ. ಇಷ್ಟೇ ಅಲ್ಲ ಮದುವೆಯನ್ನು ರದ್ದುಗೊಳಿಸುತ್ತಿರುವುದಾಗಿ ಹುಡುಗನ ತಾಯಿ ಹತ್ತಿರ ನೇರವಾಗಿ ಹೇಳಿದ್ದಾಳೆ.

Leave a Reply

Your email address will not be published. Required fields are marked *