ಪುತ್ತೂರು:(ನ.29) ಬಾಂಗ್ಲಾದೇಶದಲ್ಲಿ ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣದಾಸ್ ಪ್ರಭು ಅವರನ್ನು ಬಂಧಿಸಿ ದೌರ್ಜನ್ಯಕ್ಕೆ ಒಳಗಾಗಿಸಿರುವ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ತೀವ್ರವಾಗಿ ಖಂಡಿಸಿದ್ದಾರೆ.
ಇದನ್ನೂ ಓದಿ: ⭕ಬೆಳ್ತಂಗಡಿ: ಮದುವೆಯಾಗ್ತೇನೆ ಅಂತ ಕೊರಗಜ್ಜನ ಮೇಲೆ ಆಣೆ ಮಾಡಿ ಕೈಕೊಟ್ಟ ಪ್ರಿಯಕರ
ವಿಶ್ವದ ಹಿಂದೂ ಸಮುದಾಯ ಇಂದು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಅತ್ಯುಗ್ರವಾಗಿ ಖಂಡಿಸಬೇಕಾದ ಅನಿವಾರ್ಯತೆ ಇದೆ.
70ರ ದಶಕದಲ್ಲಿ ಬಾಂಗ್ಲಾದೇಶದ ವಿಮೋಚನೆ ಆದಾಗ ಅಲ್ಲಿನ ಲಕ್ಷಾಂತರ ಮಂದಿ ಬಾಂಗ್ಲಾದೇಶಿಯರು ಸಂಕಷ್ಟದಲ್ಲಿದ್ದಾಗ ಅನ್ನ ನೀಡಿ ಉಪಕಾರ ಮಾಡಿದಂತಹ ಇಸ್ಕಾನ್ ಸಂಸ್ಥೆಯ ಮೇಲೆ ಕೃತಘ್ನ ಮತಾಂಧರು ಇಂದು ದಾಳಿಯನ್ನು ಮಾಡುತ್ತಿದ್ದಾರೆ.
ಚಿನ್ಮಯ ಕೃಷ್ಣದಾಸ್ ಪ್ರಭು ಅವರನ್ನು ಬಂಧಿಸಿ ದೌರ್ಜನ್ಯಕ್ಕೆ ಒಳಗಾಗಿಸಿದ್ದಾರೆ. ಈ ಮತಾಂಧ ಸರಕಾರ ಮತ್ತು ಮತಾಂಧ ಜನತೆಯ ವಿರುದ್ಧ ವಿಶ್ವದ ಸಮಸ್ತ ಇಂದು ಬಾಂಧವರು ಒಕ್ಕೂರಲಿನಿಂದ ವಿರೋಧಿಸಬೇಕಾಗಿದೆ.
ಅಲ್ಲದೆ, ತೀವ್ರತರವಾಗಿ ಖಂಡಿಸಬೇಕಾಗಿದೆ. ಚಿನ್ಮಯ ಕೃಷ್ಣದಾಸ್ ಅವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಮತ್ತು ಹಿಂದುಗಳ ಮೇಲಣ ದೌರ್ಜನ್ಯಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.