ಬೆಳ್ತಂಗಡಿ:(ಡಿ.9) ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಜೇಸಿ ಸಪ್ತಾಹ ಕಾರ್ಯಕ್ರಮವು ಡಿ.14 ರಿಂದ 20 ರವರೆಗೆ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ನಡೆಯಲಿದೆ ಎಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್.ಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ: Bantwala: ಕೋಮುಭಾವನೆ ಕೆರಳಿಸುವ ಅವಹೇಳನಕಾರಿ ಪೋಸ್ಟ್
ಕಳೆದ 46 ವರ್ಷಗಳಿಂದ ಹಲವಾರು ಅಧ್ಯಕ್ಷರುಗಳು ಜೆಸಿ ಸಂಸ್ಥೆಯನ್ನು ಮುನ್ನಡೆಸಿ ಅದ್ದೂರಿ ಜೇಸಿ ಸಪ್ತಾಹವನ್ನು ಬೆಳ್ತಂಗಡಿಯ ಹಬ್ಬವಾಗಿ ಆಚರಿಸುತ್ತ ಬಂದಿರುತ್ತಾರೆ. ಈ ವರ್ಷ ವಿನೂತನವಾಗಿ ಸಪ್ತಾಹವನ್ನು ಆಚರಿಸುತ್ತಿದ್ದು ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸುತ್ತಿದ್ದಾರೆ.
ವಿವಿಧ ಕ್ಷೇತ್ರದ ಸಾಧಕರಿಗೆ ಸಾಧನಾಶ್ರೀ, ಸಮಾಜ ಸೇವೆ ನೀಡುತ್ತಿರುವ 7 ಸಂಘ ಸಂಸ್ಥೆಗಳಿಗೆ ಸೇವಾಶ್ರೀ ಪುರಸ್ಕಾರ ನೀಡಿ ಗೌರವಿಸಲಾಗುವುದು. ಜೊತೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಗೌರವ ಸನ್ಮಾನ ನಡೆಯಲಿದೆ. ತಾಲೂಕಿನ ಅದ್ಭುತ ಯುವ ಸಾಧಕ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಯುವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.
ಜೇಸಿ ಸಪ್ತಾಹದ ಸಂಯೋಜಕಿ ಹೇಮಾವತಿ ಮಾತನಾಡಿ, ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇರವೇರಿಸಲಿದ್ದಾರೆ. ಹಲವಾರು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದು ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ.
ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ದೆ, ಆದರ್ಶ ದಂಪತಿ, ಫ್ಯಾಶನ್ ಶೋ, ಸ್ಟಾರ್ ಸಿಂಗರ್, ಕಥೆ ಎಡ್ಡೆ ಉಂಡು, ಎಕ್ಸೆಲ್ ಸಂಭ್ರಮ, ನೃತ್ಯ ಸಂಗಮ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪೂರ್ವಾಧ್ಯಕ್ಷರಾದ ಚಿದಾನಂದ ಇಡ್ಯ, ನಾರಾಯಣ ಶೆಟ್ಟಿ, ಸಪ್ತಾಹದ ಸಹ ಸಂಯೋಜಕ ರಕ್ಷಿತ್ ಅಂಡಿಂಜೆ ಉಪಸ್ಥಿತರಿದ್ದರು.