ಮಂಗಳೂರು:(ಡಿ.10) ಕಾರುಗಳ ಮೇಲಾಟಕ್ಕೆ ಪಾದಚಾರಿ ವೃದ್ದೆಯೊಬ್ಬರು ಬಲಿಯಾದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ರಾಷ್ಟ್ರೀಯ ಹೆದ್ದಾರಿ 66 ಆಡಂಕುದ್ರು ಬಳಿ ಸೋಮವಾರ ಸಂಜೆ ನಡೆದಿದ್ದು ಕಲ್ಲಾಪು, ಆಡಂಕುದ್ರು ಪ್ರದೇಶ ಮೃತ್ಯು ಕೂಪವಾಗಿ ಮಾರ್ಪಟ್ಟಿದೆ.
ಇದನ್ನೂ ಓದಿ: ಬೆಳ್ತಂಗಡಿ: ವಿ.ಹಿ.ಪ ಬಜರಂಗದಳ ಕಳೆಂಜ ಘಟಕದ ವತಿಯಿಂದ ದತ್ತಮಾಲಧಾರಣೆಗೆ ಚಾಲನೆ
ವೃದ್ದ ಮಹಿಳೆ ಸ್ಥಳದಲ್ಲೇ ಪ್ರಾಣ ಕಳಕೊಂಡರೆ, ಕಾರುಗಳು ಆಳವಾದ ಕಮರಿಗೆ ಉರುಳಿ ಬಿದ್ದಿವೆ. ಉಳ್ಳಾಲ ತೊಕ್ಕೊಟ್ಟು ಚೆಂಬುಗುಡ್ಡೆ ಸೇವಂತಿ ಗುಡ್ಡೆ ನಿವಾಸಿ ಬೇಬಿ (65) ಮೃತ ದುರ್ದೈವಿಯಾಗಿದ್ದಾರೆ.
ಅಡಂಕುದ್ರು ಶಾಲೆಯ ಮುಂದೆ ಪುಟ್ಟ ಅಂಗಡಿ ನಡೆಸುತ್ತಿದ್ದ ಬೇಬಿ ಅವರು ಅಂಗಡಿ ಕೆಲಸದ ಬಳಿಕ ದಿನವೂ ಕಂಕನಾಡಿ ಪಂಪ್ ವೆಲ್ ನ ಅಪಾರ್ಟ್ ಮೆಂಟ್ ಒಂದರಲ್ಲಿ ರಾತ್ರಿ ಪಾಳಿ ಕೆಲಸಕ್ಕೆ ತೆರಳುತ್ತಿದ್ದರು. ಸೋಮವಾರ ಸಂಜೆ ಎಂದಿನಂತೆ ಬೇಬಿ ರಾತ್ರಿ ಪಾಳಿ ಕೆಲಸಕ್ಕೆ ಹೊರಟಿದ್ದು ಅಡಂಕುದ್ರು ಬಳಿ ಬಸ್ಸು ಹತ್ತಲು ಹೆದ್ದಾರಿ ದಾಟುತ್ತಿದ್ದಾಗ ,ಈ ದುರ್ಘಟನೆ ಸಂಭವಿಸಿದೆ.
ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ಕಡೆ ವೇಗವಾಗಿ ಹೋಗುತ್ತಿದ್ದ, ಕಾರು ಮಹಿಳೆಗೆ ಡಿಕ್ಕಿ ಹೊಡೆದಿದೆ . ಪರಿಣಾಮ ಬೇಬಿ ಸ್ಥಳದಲ್ಲೇ ಪ್ರಾಣ ತೆತ್ತಿದ್ದಾರೆ. ಮಹಿಳೆಯ ಡಿಕ್ಕಿ ಹೊಡೆದ ಹೆದ್ದಾರಿ ಅಂಚಿನ ಆಳವಾದ ಕಮರಿಗೆ ಉರುಳಿ ಬಿದ್ದಿದೆ.
ಇದರ ಬೆನ್ನಲ್ಲೇ ಪೋಲೋ ಕಾರನ್ನ ಓವರ್ ಟೇಕ್ ಮಾಡುತ್ತಿದ್ದ ಮತ್ತೊಂದು ಕಾರು ಕೂಡ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೊದೆಗೆ ಬಿದ್ದಿದ್ದು ಕಾರು ಚಾಲಕರಿಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.