Fri. Dec 27th, 2024

kidiyoor: ಅವನತಿ ಅಂಚಿನಲ್ಲಿರುವ ಬಿಳಿಗೂಬೆಯನ್ನು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ ನಿತ್ಯಾನಂದ‌ ಒಳಕಾಡು

ಕಿದಿಯೂರು:(ಡಿ.21) ಅವನತಿ ಅಂಚಿನಲ್ಲಿರುವ ಬಿಳಿಗೂಬೆಯನ್ನು ರಕ್ಷಿಸಿರುವ ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು,‌ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: ಕಡಬ: 13 ವರ್ಷಗಳ ಬಳಿಕ ತಾಯಿಯಾದ ಖುಷಿಯಲ್ಲಿದ್ದ ನಾಲ್ಕು ತಿಂಗಳ ಗರ್ಭಿಣಿ ಸಾವು

ನಿಶಾಚರ ಪಕ್ಷಿಯಾಗಿರುವ ಗೂಬೆಯು ಹಗಲು‌ಹೊತ್ತಿನಲ್ಲಿ ಕಿದಿಯೂರು ಹೋಟೆಲು ಬಳಿಯ ಕಟ್ಟಡವೊಂದರ ಸನಿಹ ನಿದ್ರಿಸುತ್ತಿತ್ತು.

ಗೂಬೆಯನ್ನು ಗಮನಿಸಿದ ಮಂಗವೊಂದು, ಗೂಬೆಯ ಮೇಲೆ ಎರಗಿ ಹಲ್ಲೆ ನಡೆಸಿತ್ತು. ವಿಷಯ ತಿಳಿದ ಒಳಕಾಡುವರು,‌

ಸ್ಥಳಕ್ಕೆ ಬಂದು ಮಂಗವನ್ನು ದೂರ ಅಟ್ಟಿಸಿ, ಹಾರಲಾಗದ ಸ್ಥಿತಿಯಲ್ಲಿದ್ದ ಗೂಬೆಯನ್ನು ರಕ್ಷಿಸಿದರು. ಬಳಿಕ ಪಂಜರದಲ್ಲಿಟ್ಟು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *